Poem

ಒಕ್ಕೊರಲ ಧನಿ

ಒಕ್ಕೊರಲ ಧನಿ'

ಧನಿ ಎತ್ತಲೆ ಬೇಕಾಗಿದೆ 
ನಮಗೆ ನ್ಯಾಯ ಬೇಕಾಗಿದೆ
ಅನ್ಯಾಯ ಸಾಕಾಗಿದೆ 

ಜನರ ಪರಿಧಿಯೊಳಗೆ 
ತುಸು ತಂಗಾಳಿ ಬೀಸಿದಂತಿದೆ
ಆದರೂ ಸಾಕಾಗಿದೆ ಸ್ವಾರ್ಥತತೆಯ ನೋಡಿದ ಮೇರೆಗೆ
ಮೈ ನಡುಗಿ,,,,ಮಳೆ ಸುರಿದಾಗ ಅನಿಸುವುದು
ತುಸು ಬರದೆ ಇದ್ದಿದ್ದರೆ! ಬಂದಂತಿದೆ ಎಂದು

ಜಾಗತಿಕ ಪರಿಶೀಲನೆಯಲ್ಲಿ 'ನಾನು'
'ನಮ್ಮನ್ನು' ತುಸು ಜ್ಞಾಪಿಸಿಕೊಂಡತಿರುವುದು 
ಮಾಧ್ಯಮಗಳ ಸೂಚನೆಗಳ ನಡುವೆ 
ಗಿರಿಕಂಧರಗಳ ಒಡಲನ್ನ ಮೈಲಿಗಲ್ಲನ್ನಾಗಿ ಮಾಡಿ
ಅಳುತಿಹುದು ಜೀವವಿಲ್ಲದಂತೆ 
ನಮಗೆ ನಾವೇ ನ್ಯಾಯ ಕೇಳಲು 
ನ್ಯಾಯ ಬೇಕೆ ಬೇಕು ಎಂದು
ನಮ್ಮುಸಿರನು ನೀಡುತಿಹ ನಿಮಗೆ ಹಾಗೆ
ನಿಮ್ಮುಸಿರಿನ ಅಗತ್ಯದ ಸತ್ಯ ಸಂಕೋಲೆ
ಬರಿಗಾಲಲಿ ನಡೆದ ದಾರಿಯಲಿ ಸಾವಿರ ಮತಗಳ ಕುಂಠಿತ ಕಾಣದೆ
ನಾ ಬೆಳೆವೆ ಈಗ ನಿಮ್ಮದೇ ದಾಳಿಯ ಪಾಲಿಗೆ
ನಿಮ್ಮಂತೆಯೆ ನಾವಿರಲು ಬದುಕಲಾಗದೇಕೆ ?
ದಾವೆ ಹೂಡಿ ಬರಬೇಕು ? ನಾವುಗಳು ಪ್ರಧಾನ ನ್ಯಾಯಾಲಯ ,,ಹಿಮಾಲಯಕೆ 
ನಮಗೆ ನ್ಯಾಯ ಬೇಕಾಗಿದೆ 
ನ್ಯಾಯ ಬೇಕು ಬೇಕೇ ಬೇಕು ಎಂದಾಗ

ಬಿಸಿಲ ತಂಪೆಲೆರಗಳಲಿ ನಾವ್ ಬಾಡುತಿರುವಾಗ 
ನಿಮ್ಮ ಪ್ರೇಮ ನಿವೇದನೆಗೆ ನಾವ್ ನಿಶ್ಯಕ್ತರಾಗಬೇಕಾಗಿದೆ,,,
ಮನವ ನೋಯಿಸದೆ ಸದಾ ನಸುನಗುತಲಿ 
ಬೀಳ್ಕೊಡುವೆವು ಎಂದೂ ಎಂದೆಂದೂ
ಮರೆವಿನ ಮರೆಯಲ್ಲಿ ನಮ್ಮಗಳ ಪ್ರತಿದಿನದ ವಿನಾಶದಲಿ 
ಒಂದು ಹತ್ಯಾಕಾಂಡ ರೂಪು ತಳೆಯುತಿದೆ 
ನಾವು ನ್ಯಾಯಕೆ ದಾವೆ ಹೂಡಿಯಾಗಿದೆ 
ನಮಗೂ ನ್ಯಾಯ ಬೇಕು ಬೇಕೆ ಬೇಕು ಎಂದಂದಾಗ

ಬರುವ ಉರಿಬಿಸಿಲ ತಡೆದು ತಮ್ಮಲ್ಲಿರಿಸಿಕೊಂಡು
ನೆಮ್ಮದಿಯ ಭಾಗವಾಗಿ ತಣ್ಣಗೆ
ತುಸು  ಮಳೆ ಹನಿಯು ಸೋಕಿದರೆ 
ಸಾಕು ಅದೆ ನಮಗೆ ಮರುಜೀವ 
ನಿಮ್ಮನಾಲಾಪಿಸದ ನಮ್ಮ 
ನಮ್ಮ ಹೀಗೆಯೇ ಇರಲು ಬಿಡಿ 
ನಾವು ನ್ಯಾಯಕೆ ದಾವೆ ಹೂಡಿ ಬಂದಿಹೆವು
ನಮಗೂ ನ್ಯಾಯ ಬೇಕೆ ಬೇಕಾಗಿದೆ ಎಂದು...

By: ಶ್ರೀಧರ ಜಿ (ಯಗೋಶ್ರೀ)

Comments[7] Likes[38] Shares[1]

Submit Your Comment

Latest Comments

ರಘು
Jul 08,2020

ತುಂಬಾ ಚೆನ್ನಾಗಿದೆ ಗೆಳೆಯ

Ranganath
Jul 08,2020

👌

A orKish
Jul 08,2020

Nice

ಯಶೋಧರಶಯ ಯಶೋಧರೋಶಯaY
Jul 08,2020

ಬಹಳ ಅರ್ಥ ಪೂರ್ಣವಾಗಿದೆ... ಇಂದಿನ ಪ್ರಸ್ತುತ ದಿನಗಳಲ್ಲಿ ಪರಿಸರವನ್ನು ವಿನಾಶದ ಅಂಚಿಗೆ ತಲುಪಿಸುತಿರುವ ಜನಮನಗಳ ಕಂಡು ಒಂದು ಆತಂಕ ಒಡಮೂಡಿ, ಪರಿಸರವೇ ಮುಂದೆ ನಿಂತು ನಮಗೆ ನ್ಯಾಯ ಬೇಕಾಗಿದೆ, ನ್ಯಾಯ ಬೇಕೆಂದು ಒಕ್ಕೊಲರ ದನಿಯಿಂದ ಮೂಕ ಪ್ರತಿಭಟನೆ ಮಾಡುತಿರುವುದನ್ನ ಕವಿತೆ ಮೂಲಕ ಬಹಳ ಉನ್ನತವಾಗಿ ಹೇಳಿದ್ದೀರಿ... ಅಭಿನಂದನೆಗಳು ಉತ್ತಮ ಕವಿತೆ ಶುಭವಾಗಲಿ ತಮಗೆ 😊💐

Shilpaಶಿಲ್ಪಶಿಶ
Jul 06,2020

Nice

Madhusudhana. P
Jul 06,2020

Gud job... Nice

Mahendra.s.m
Jul 06,2020

👌🏼