Poem

ಪರಿಚಿತರು

ಹೊಸ ಬಂಧನದ ಎಳೆಯಲ್ಲಿ ಎರಡು ಜೀವಗಳು 
ಆಗ ತಾನೇ ಮುಗಿದಿದ್ದವು ಎಲ್ಲ ಶಾಸ್ತ್ರಗಳು 
ಅಪರಿಚಿತರಂತೆ ಇಬ್ಬರ ಮುಖ ಭಾವಗಳು 
ಪರಿಚಿತರಾಗಲು ತುದಿಗಾಲಲ್ಲಿ ಕಾದಿದ್ದವು ಮನಗಳು 

ಶುರುವಾಗಿತ್ತು ಮುಂಗಾರಿನ ಹನಿಗಳ ಇಳಿಕೆ 
ಇಬ್ಬರ ನಡುವೆ ಮರೆ ಸರಿಸಲು ಕ್ಷಣಗಳ ಎಣಿಕೆ 
ಸಜ್ಜಾಗಿತ್ತು ಹೊರಬರಲು ಅವಿತಿದ್ದ ಬಯಕೆ 
ಅಪರಾದದ  ಅರಿವಾಗಿ ಶರಣಾಗಿತ್ತು  ನಾಚಿಕೆ 

ಕಾಮನ ಬಿಲ್ಲಿನಿಂದ ಹೃದಯಗಳಿಗೆ ನಿರಂತರ ಕರೆಗಳು 
ಪಿಸುಗುಟ್ಟಿ ಉತ್ತರಿಸಿದ ನೆಪದಿ ಒಂದಾದ ಮನಗಳು 
ಬೀಳುವ ಹನಿಗಳನೆಲ್ಲ ಹಿಡಿದಾಡುತ  ಜೋಡಿ ಕೈಗಳು 
ಮಳೆಯ ಬಲೆಯಲ್ಲಿ ಸೆರೆಯಾಗಿದ್ದ ಜೀವಗಳು 

ಮೌನದ ಮಾತುಗಳು  ವಿಪರೀತ ವಿನಿಮಯ 
ಇಬ್ಬರ  ತುಟಿಗಳ ನಡುವೆ  ಅಂತರವಿಲ್ಲದೆ 
ಪ್ರೇಮದ ತಾಳದಂತೆ ಇಬ್ಬರ ಅಭಿನಯ 
ಇದು ಮುಂಗಾರಿನ ಸಿಹಿ ಸಂಚಲ್ಲವೇ..?? 

By: ಷಣ್ಮುಖಾರಾಧ್ಯ ಕೆ ಪಿ

Comments[0] Likes[0] Shares[0]

Submit Your Comment

Latest Comments

No comments are available!