Poem

ಪರಿಗಣನೆ

ನನ್ನ ಮನಸ್ಸೆಲ್ಲ ನೀನೆ ಅಲ್ಲವೇ
ನಿನ್ನ ಕನಸಲ್ಲೂ ನಂಗೇ ಜಾಗ ಇಲ್ಲವೇ?

ನನ್ನ ನೆನಪೆಲ್ಲ ನೀನೆ‌‌ ಅಲ್ಲವೇ
ನಿನಗೆ ನನ್ನ ನೆನಪೇ ಇಲ್ಲವೇ?

ನನ್ನ ಉಸಿರ ಹೆಸರು ನೀನೆ‌ ಅಲ್ಲವೇ
ನನ್ನ ಹೆಸರು ನಿನಗೆ ಗೊತ್ತೆ ಇಲ್ಲವೇ?

ನನ್ನ ಪುಟ್ಟ ಜಗವು ನೀನೆ ಅಲ್ಲವೇ
ನಿನ್ನ ಜಗದ ಪರಿಧಿಯಲ್ಲಿ ನಾನೇ ಇಲ್ಲವೇ?

ನನ್ನ ಅರಿವೆಲ್ಲ ನೀನೆ ಅಲ್ಲವೇ
ನನ್ನ ಇರುವಿಕೆಯ ಅರಿವು ನಿನಗೆ ಇಲ್ಲವೇ?

ನೀನೆ ನನ್ನ ಪ್ರೇರಣೆ
ನೀನೆ‌‌‌ ನನ್ನ ಮನ್ನಣೆ
ನಿನಗೆ ನನ್ನ ಜಾಗರಣೆ
ಈ ಕೊರೋನಾ ಬಿಡುವಲಾದ್ರು
ಮಾಡು ಚೂರು ನನ್ನ ಪರಿಗಣನೆ!!
 

By: ಪಾಲಾಕ್ಷ ಗೌಡ ಕೆ.ಎಲ್

Comments[1] Likes[5] Shares[2]

Submit Your Comment

Latest Comments

pratibha d
Jul 06,2020

👌👌