Poem

ಪ್ರತಿಭೆ ನಿನಗಿದೊ ಸಾವಿರ ನಮನ

ಪ್ರತಿಭೆ ನಿನಗಿದೋ ಸಾವಿರ ನಮನ 
 ಪರಿಶ್ರಮದೆಡೆಗಿರಲಿ ನಿನ್ನಯ ಪಯಣ 
ಮಾಡುತ್ತಿರುವ ನಿರಂತರ ಮನನ 
ನಿಲ್ಲದೀ ಜೀವನದ ಸುಂದರ ಯಾನ
ಸಾಧನೆ, ಶಿಖರವ ಏರೋಣ.॥ಪ॥

ಏಕಾಗ್ರತೆಯ ಮನಸ್ಸಿನಲಿ ಓದೋಣ.
ಗುರಿಯ ಮುಟ್ಟೋ ವಿಧಾನವ ಅರಿಯೋಣ.
ಹದವಾದ ಹಂತದಲ್ಲಿ ಹದಗೊಳಿಸೋಣ.
ತಾಳ್ಮೆಯೆನ್ನುವ ತಳಹದಿಯ ಕಟ್ಟೋಣ.ಸಾಧನೆಯ ಶಿಖರವ ಏರೋಣ.॥೧॥

ದಿಟ್ಟ ತನದ  ದಾರಿಯಲ್ಲಿ ನಡೆಯೋಣ.
ಕೊಂಕು ನುಡಿಗೆ ಬಗ್ಗದಂತೆ ನುಗ್ಗೋಣ.
ಮಂಥರೆಯ ಮನಸ್ಸುಗಳನ್ನು ಅರಿಯೋಣ.
ಬಲವ ತುಂಬಿ ಒಲವಿನಿಂದ ಓಡೋಣ.
ಸಾಧನೆ ಶಿಖರವ ಏರೋಣ.॥೨॥

ದೂರದಲ್ಲಿ ದೃಷ್ಟಿ ಹಾಕಿ ಬಿಂಬವದಕೆ ಸೃಷ್ಟಿಸೋಣ.
ಏಕಲವ್ಯ ನಡೆದ ದಾರಿಯ ಸವೆಸೋಣ.
ಸಿಗುವ ನಗುವ ನಲಿವ ನೋವ ಭರಿಸೋಣ.
ಛಲವ ತುಂಬಿ ಸೋಪಾನವ ಗಳಿಸೋಣ.
ಸಾಧನೆ,ಶಿಖರವ ಏರೋಣ.॥೩॥

ಕಷ್ಟ ಸುಖದ ಮುಳ್ಳು ಹೂವು ಬದಿಗಿರಿಸೋಣ.
ಪ್ರೀತಿ ಹಂಚಿ ಸುಗಂಧ ಬೀರಿ ಬದುಕೋಣ.
ಮುಗಿದು ಹೋದ  ಕ್ಷಣಗಳನ್ನು ಮರೆಯೋಣ.
ಚಿಗುರುತಿರುವ ಮೊಗ್ಗಿನಲ್ಲಿ ನಾವು ಒಂದಾಗೋಣ.
ಸಾಧನೆಯ ಶಿಖರವ ಏರೋಣ.॥೪॥

 

By: ಶ್ರೀ ಬಿ.ಟಿ.ಹಳ್ಳಿ (ಬಾಳುಕವಿ)

Comments[1] Likes[3] Shares[0]

Submit Your Comment

Latest Comments

BASAVARAJA m
Jul 08,2020

Super