Poem

ರೈತ - ಮಳೆ

ಬರಡಾಗಿತ್ತು ಇಡೀ ಜಗವು
ಒಣಗಿತ್ತು ಗಿಡ ಮರವು
ರೈತನ ಮೊಗದಲ್ಲಿತ್ತು ಬೇಸರ
ಎಂದು ಮಳೆ ಬರುವುದೆಂಬ ಕಾತರ (೧)

ಅದೊಂದು ದಿನ ಮುಗಿಲಲಿ
ಕವಿದಿತ್ತು ದಟ್ಟ ಮೋಡ 
ಮಳೆ ಬರುವುದೆಂಬ ನಿರೀಕ್ಷೆಯಲ್ಲಿ
ರೈತ ತಲೆಯೆತ್ತಿ ಆಗಸವ ನೋಡಿದ  (೨)

ಮೋಡಗಳೇಲ್ಲಾ  ಬಡಿದಾಡಿಕೊಂಡು
ಮುತ್ತಿಟವು ಭುವಿಯ ಮಳೆಯಂತೆ
ಹನಿಯುತ್ತ ಬಂದ ಮಳೆಯ ಕಂಡು
ಕುಣಿದನು ರೈತನು ಮಗುವಂತೆ     (೩)

ಹೊತ್ತು ನೇಗಿಲ ತನ್ನ ಭುಜದಲಿ
ಹಗಲು ರಾತ್ರಿ ಯೆನ್ನದೆ ತಾ ದುಡಿದ
ತನ್ನ ಊಟವ ತ್ಯಾಗ ಮಾಡಿ
ಜಗಕ್ಕಾಗಿ ಅನ್ನವ ತಾ ನೀಡಿದ     (೪)

ಭುವಿ ತಾಯಿಗೆ ರೈತ ತಾನು 
ಹಸಿರು ಸೀರೆಯ ಉಡಿಸಿದ
ಮಳೆಯ ಸುರಿಸಿದ ದೈವಕೆ
ಎರಡೂ ಕೈಯೆತ್ತಿ ನಮಿಸಿದ       (೫)

ಮಳೆಯು ಬಂದರೆ ರೈತನಿಹನು
ಅನ್ನದಾತನಿದ್ದರೆ ನಾವಿರುವೆವು
ಮಳೆಯು ಬರಲು ಹಸಿರು ಬೇಕು
ಉಳಿಸಿ ಬೆಳೆಸಿರಿ ಹಸಿರನು...   (೬)

By: ನವನೀತ ಗೌಡ ಕೆ ಎನ್

Comments[7] Likes[52] Shares[8]

Submit Your Comment

Latest Comments

Rajeshwari
Jul 21,2020

Super!

VIJETH
Jul 08,2020

Poet Nethu

Srikanth Arya
Jul 06,2020

Very nice👏👏⛈⭐🌛🌝

araSraS
Jul 06,2020

Good one 👌

Manoj
Jul 06,2020

Super bestie 🤩