Poem

ಸಾವಿನೊಳು ಮದ್ದು

ಮನಸ್ಸಿಗೆ ಮದ್ದು ನೀಡುವುದಾದರ
ದೇಹಕ್ಕ ಮದ್ದಯಾಕ ಬೇಕ 
ಮನಸ್ಸಿನ ನೋವನ್ನ ಮಾತಾಗಿ ಹಂಚಿ
ಮೌನವ ನೀ ಹೂರಗ ಹಾಕ

ಸರಿ ಸರಿಯೇ ಜೀವ
ಮೆಲಕ್ಕ ಹೋಗತಿನಂತ
ದೇಹಕ್ಕ ಒಮ್ಮೆ ಹೇಳಿತಂತ
ಮನಸ್ಸಿಗೆ ಮದ್ದ ನೀಡುವುದಾದರ
ದೇಹಕ್ಕ ಮದ್ದಯಾಕ ಬೇಕ

ಅಕ್ಕನ ಮುಂದ ಅಣ್ಣನ ಮುಂದ
ಸತ್ತ ಅವ್ವನ ನೆನದಂಗ್ಹ ಆತ
ಕೈ ಮಾಡಿ ಆಕೀ ಕರದಂಗ್ಹ ಆತ
ಕೈ ಮಾಡಿ ನಿನ್ನ ಕರದಂಗ್ಹ ಆತ

ಆಸೆಗೆ ಮೀರಿದ ಲೋಭಕ್ಕ ಜಾರಿದ 
ಮನಸ್ಸಿನ ಮಾತ ನೀಯಾಕ ಕೇಳ ಬೇಕ
ನೀ ಯಾಕ ಕೇಳ ಬೇಕ
ಸತ್ತು ಛಟ್ಟದಿ ನಿನ್ನ ಎತ್ತುವ
ನಾಲ್ಕು ಹೆಗಲಗಳಿದ್ದರ ಅಷ್ಟ ಸಾಕ

ಮನಸ್ಸಿಗೆ ಮದ್ದ ನೀಡುವುದಾದರ 
ದೇಹಕ್ಕ ಮದ್ದ ಯಾಕ ಬೇಕ

By: ಸಂತೋಷ

Comments[0] Likes[0] Shares[0]

Submit Your Comment

Latest Comments

No comments are available!