Poem

ಶಾಲ್ಮಲಿ

ತುಂಬ್ಯಾಳೊ ಶಾಲ್ಮಲಿ
ಸೋಮೆಶ್ವರನ ತೂಳ್ಯಾಕ
ಅರಳ್ಯಾವ ಬಿಳಿಕಮಲ
ಆ ಶಿವನ ಪೂಜೆಕ

ನೆತ್ತಿಯ ಗಂಗಿನ 
ಹಂಗಿಸಿ ನೋಡಿದರ
ಹಂಗನ್ನ ಇಡದಂಗ 
ತಿರಿಸ್ಯಾಳೂ ಈ ದಿನ

ಬತ್ತಿದ ಸಂಗಮ
ಒತ್ತ ಒತ್ತಿ ತುಂಬೆತೂ
ಲಿಂಗ ಹಿಡಿದ ಬಸವಣ್ಣ 
ಶಿವಪೂಜೆ ನೆಡಸ್ಯಾನೊ
ಕೃಷ್ಣೆಯ ಅರ್ಭಟಕ 
ಸಂಗಮ ನಡಗ್ಯಾನೊ
ತುಂಬ್ಯಾಳೊ ಶಾಲ್ಮಲಿ
ಸೋಮೆಶ್ವರನ ತೂಳ್ಯಾಕ

ಬಿಡದಂಗ ಸುರಿದರ
ಈ ಭುವಿ ದಂಗ
ಹುಚ್ಚೆದ್ದವು ಕುಣಿದಾವೂ
ಕಾಡಿನ ತರಂಗ

ತುಂಬ್ಯಾಳೊ ಶಾಲ್ಮಲಿ
ಸೋಮೆಶ್ವರನ ತೂಳ್ಯಾಕ
  
ಸಂತೋಷ 
 

By: ಸಂತೋಷ

Comments[0] Likes[2] Shares[0]

Submit Your Comment

Latest Comments

No comments are available!