Poem

ಶ್ರದ್ಧಾಂಜಲಿ

"ಶ್ರದ್ಧಾಂಜಲಿ"

ಮನಸಿನ ಮೋಹ 
ಮನವಿಗೆ ಊಹಾ-ಪೋಹ
ಮನದಾಸೆಯ ಮನಕೆ 
ಶ್ರದ್ಧಾಂಜಲಿಯ ಸುಳ್ಳಿನ ದಾಹ||೧||

ಮನಸು ಚೂರುಸೂರು
ಕನಸು ಆರುನೂರು
ಕಾಣದ ಸತ್ಯತೆ
ಶ್ರದ್ಧಾಂಜಲಿಯ ಸನಿಹದ ದೂರು||೨|| 

ಆಸೆ ಸುಳ್ಳು 
ಮನವೆ ಪೊಳ್ಳು 
ಎಲ್ಲ ಸಮಾನ ಈಗ ಶ್ರದ್ಧಾಂಜಲಿಯ ಈ ದೇಹ||೩||

ಸುಣ್ಣಬಣ್ಣ 
ಮಾನಕೆ ಕಣ್ಣಾ? 
ನೀನು ನೀನಾಗಲು 
ಮಾಡಬೇಡ ಮನಕೆ
 ಭಿನ್ನ ಶ್ರದ್ಧಾಂಜಲಿಯ ಮೋಹ||೪||

ದೂರ ಭಾರ 
ಮನದ ಸಾರ
ತಾರ ಮನಕೆ ಮನಸಿಗೆ 
ಶ್ರದ್ದಾಂಜಲಿಯ ಶೌಚಾಗಾರ||೫||

ಜಗವಿದು ದೇಹ 
ಮನವಿದು ಮೋಹ 
ಎಲ್ಲ ಇಲ್ಲಿ ಮನದ ಆಹಾ,,
ಶ್ರದ್ಧಾಂಜಲಿಯ ಕ್ಷಣವು ಶೋಕದಾಹ||೬||

ಕೊಡುವ ಮನಸು 
ಹೃದಯದ ಬಿರುಸು
ಏಳು ಬೀಳು ಆಳು ನಿಲ್ಲು 
ಕಾಯುತಿಹುದು ನಮಗೆ 
ಶ್ರದ್ಧಾಂಜಲಿಯ ಗೋಳು ಈಗೆ||೭|| 

ಶುಭವು ದಿನದ ದಿನಕೆ
ಮನದ ಮನ್ವಂತರಕೆ
ಮುನಿಸು ಮಾರು 
ಇಲ್ಲಿ ಸ್ನೇಹವೇ ನೀರು 
ನಿನ್ನದಲ್ಲವಿದು ನಿನ್ನದೇ ಮಾನವೀಯತೆ 
ಇದು ಶ್ರದ್ಧಾಂಜಲಿಯ ಬಾಳು ಜೀವಿಸು ನಿನ್ನಿತಕೆ||೮||

ಓ‌‌ ಮಾನವ ನೀ ಈ ಸಾರವ
ತಿಳಿಯೊ ಮನದ ಈ ನೋವ 
ಬರ ಬಂದಿದೆ ಢಣ ಢಣದ ಮಾಯೆಗೆ
ಮಾಯೆಯು ಕೊನೆಗೆ ಶ್ರದ್ಧಾಂಜಲಿಯ ಕಡೆಗೆ||೯||
 

By: ಶ್ರೀಧರ ಜಿ

Comments[21] Likes[76] Shares[4]

Submit Your Comment

Latest Comments

siddaguru H
Jul 08,2020

Chennagide , matte mundina bavishya ge olleyadagali

NaguKiran Kiru
Jul 08,2020

ಕವಿಯು ಕವಿತೆಯನ್ನು ಸೃಷ್ಟಿಸುವುದಿಲ್ಲ ಬದಲಾಗಿ, ಕವಿತೆಯೇ ಕವಿಯ ಸೃಷ್ಟಿ ಮಾಡಿದೆ,, ಅದ್ಭುತ brother

Vinod shetty
Jul 08,2020

Wonderful lines shridhar , good luck, keep it 👍

Akshaya
Jul 08,2020

shreedhar super

Dr.raghavendra
Jul 08,2020

Good

Indu
Jul 08,2020

Sogasada kavite

BhavanaBhavanahavana
Jul 08,2020

Tumba chennagide

Rohith
Jul 06,2020

Nice shree

Bhavya. R
Jul 06,2020

Nice

DEVE GOWDA
Jul 06,2020

Excellent sreedhar keep it up

Gurukiran
Jul 06,2020

Super bro

ಶಿಲ್ಪಶಿಶ
Jul 06,2020

Super brother ಪದ ಸಂಪತ್ತು ಬಹಳ ಚೆನ್ನಾಗಿದೆ

Manju B NaaNu
Jul 06,2020

ಚಂದವುಂಟು ಮಾರಾಯಾ

NARAYANA
Jul 06,2020

ಬರವಣಿಗೆ ತುಂಬಾ ಚೆನ್ನಾಗಿದೆ, ಶ್ರದ್ಧೆಯಿಂದ ಬರೆದಾಗ ಶುದ್ಧವಾಗಿ ಮೂಡಿಬಂದ ಕವನಕ್ಕೆ ಎಂದಿಗೂ ಶ್ರದ್ಧಾಂಜಲಿಯಾಗದು.....

Rajathashree
Jul 06,2020

ಚೆನ್ನಾಗಿದೆ 👍 👍

Arun
Jul 06,2020

Chennagide👌

Hanumantharaya K N
Jul 06,2020

ಚೆನ್ನಾಗಿದೆ ಗೆಳೆಯ