Poem

ಸ್ನೇಹದ ಕಡಲಲ್ಲಿ

ಬದುಕಿನ ಹಾದಿಯಲ್ಲಿ ನಮ್ಮ ಸ್ನೇಹ ಬೆಸುಗೆ

ಕಳೆಯುವ ಪ್ರತಿ ದಿನವು ಅಮೃತ ಘಳಿಗೆ

ಭಾವನೆಗಳ ಪಯಣದಲ್ಲಿ ಸ್ನೇಹ

ಬೀಜ ಬಿತ್ತಲು ಪ್ರೀತಿ ಪ್ರೇಮಗಳ ಜೊತೆಗೆ

ಸಂಭ್ರಮವು ಸುತ್ತಲೂ

ಸ್ನೇಹವೆಂಬ ಬಂಧನವ ಹೊಂದಿರುವ ಧರೆ

ಒಲವು ನಲಿವುಗಳ ಕಂಡು ಮಿನುಗುತಿಹವು

ತಾರೆ ಪವಿತ್ರ ಬಂಧನ್ ಬಾಂಧವ್ಯಕ್ಕೆ ಅರಳಿದೆ

ಸಮ ಗೆಳೆತನದ ಮಿಲನಕ್ಕೆ ಪಕ್ಷಿಗಳ

ಸುಮಧುರ ಸರಿಗಮಪ

ಬಿಡಿಸಲಾಗದ ನಂಟು ಇರಲಾರದು

ಅಂತ್ಯ ಬಾಳಿನುದ್ದಕು ಬಯಸಿಹೆನು

ಗೆಳೆತನ ಸಾಂಗತ್ಯ ಹಾಸ್ಯ-ಲಾಸ್ಯಗಳ

ಸಂಗಮದಿ ಗುಚ್ಛ ಔಚಿತ್ಯದ ಅನುಬಂಧಕ್ಕೆ

ಭರಿಸಲಾಗದು ವೆಚ್ಚ

ದೈವ ಕರುಣಿಸಿದ ನಂಟಿಗೆ ತಾಗಲಾರದು

ಕೊಳೆ ಭಾವ ತುಂಬಿದ ವದನ ವಾಯಿತು

ಕಾಂತಿ ತುಂಬಿದ ಕಳೆ ಸಾಗುತಿಹುದು ಸದ್ದಿಲ್ಲದೆ

ಗೆಳೆತನದ ವೇಗ ಸಿಹಿ ತುಂಬಿದ ಸಂಗವದು

ಬದುಕಿನೊಂದು ಭಾಗ

ಜೇನಿನಂತಹ ನುಡಿಯ ಕೇಳಲು

ಗೆಳೆತನವು ಇರಲು ಪ್ರೀತಿಯ ಮಾತನಾಡಲು

ಸಾಲದಾಯಿತು ಹಗಲು ಮಧುರತೆ ಸರಳತೆ

ತುಂಬಿದ ಮಾತಿನ ಹಂದರ ಕ್ಷಮತೆ,

ಸಮತೆಗಳ ಬೆಸುಗೆಯಿದು ಬಹುಸುಂದರ

By: ವೈಷ್ಣವಿ

Comments[1] Likes[10] Shares[3]

Submit Your Comment

Latest Comments

Samanth
Jul 10,2020

Good Poem