Poem

ಸೋಲು

ಒಂದೇ ಒಂದು ಬುದ್ದಿ ಮಾತು
ಸೋಲೆ ನಿನಗೆ ಮೊದಲ ತುತ್ತು
ಹಲವು ತುತ್ತ ಹೊರತು
ಶಕ್ತಿ ಬರದು ಜೀವಕೆ
ಹಲವು ಸೋಲ ಹೊರತು
ಈಡೇರದು ಗೆಲ್ಲುವ ಬಯಕೆ

ಇಲ್ಲಿ ಪ್ರಯತ್ನ ಒಂದೇ ಬೆಳೆವ ದಾರಿ
ಸೋಲೆ ಅದರ ರಾಯಭಾರಿ!

ಕೇಳುತಿರು ಜನರ ಮಾತು
ಕೊಂಕು ಮಾತೇ ನಿನಗೆ ಮುತ್ತು
ಹಲವು ಜನರ ಶ್ರಮದ ಹೊರತು
ಮುತ್ತು ಸಿಗದು ಕೈಯಿಗೆ
ಹಲವು ಕೊಂಕು ಮಾತ ಹೊರತು
ಧೈರ್ಯ ಬರದು ಮುಯ್ಯಿಗೆ

ಇಲ್ಲಿ ನೀನು ನುಗ್ಗಬೇಕು ಬಿದ್ದರು ಜಾರಿ
ಅವಮಾನವೇ ನಿನಗೆ ರಾಯಭಾರಿ!

ಕೊನೆಯದಾಗಿ ಒಂದು ಮಾತು
ಭಯವೇ ಬೇಡ ಸೋಲ ಕುರಿತು
ಹಲವು ಗೆಲುವು ಕಂಡರುನು
ಇಹುದು ಸೋಲ ಹೆದರಿಕೆ
ಹಲವು ಸೋಲು ಕಂಡವನಿಗೆ 
ಅದೇ ಹಾದಿ ಜಯಕೆ

ಇಲ್ಲಿ ಗೆಲುವು ನಿನಗೆ ದೂರದ ದಾರಿ
ಸೋಲೆ‌ ನಿನಗೆ ರಾಯಭಾರಿ!!

By: ಪಾಲಾಕ್ಷ ಗೌಡ ಕೆ.ಎಲ್

Comments[1] Likes[7] Shares[1]

Submit Your Comment

Latest Comments

pratibha d
Jul 06,2020

👌👌