Poem

ಸುಂದರ ಸಂಜೆ

ಬಾನಿನಂಚಿನ ಸಂಜೆಗೆಂಪಿಗೆ,
ಭಾವದಲೆಗಳ ನರ್ತನ!
ಬೀಸೋಗಾಳಿಯ ಸಣ್ಣಸರಸಕೆ,
ಹೆಚ್ಚಿದೆ ಹೂವಿನ ಯೌವನ!

ಭಾನುಮುಚ್ಚುವ ತುಂಟ ಮೋಡಕೆ,
ಗುಡುಗಿನ ರಾಗದ ಇಂಪನ!
ಧೂಳು ತುಂಬಿದ ಹಸಿರ ದಾರಿಗೆ,
ಹನಿಯ ಮುತ್ತಿನ ಸಿಂಚನ!

ಮುಸ್ಸಂಜೆ ತಂದ ಸಿಹಿಮೌನಕೆ,
ಭುವಿಯ ಒಡಲಲಿ ತಲ್ಲಣ!
ತಂಪುಬೀರಿದ ವಾತಾವರಣಕೆ,
ಹರಿವ ನೀರಿಗೆ ಕಂಪನ!

ಬಾನರಂಗಿಗೆ ಸೋತ ರವಿಗೆ,
ಮತ್ತೆ ಹುಟ್ಟಲು ಪ್ರೇರಣಾ!
ನಾಚಿ ಅರಳುವ ರಾತ್ರಿ ಕಮಲಕೆ,
ಸುಗಂಧದ ಪ್ರೀತಿಯ ಸಾಂತ್ವನ! 

By: ಸಹನಾ ಕಾರಂತ್‌

Comments[1] Likes[34] Shares[4]

Submit Your Comment

Latest Comments

ಶ್ರೀ ಕಿರಣ್
Jul 08,2020

ಚೆನ್ನಾಗಿದೆ..👌👌😍😍