Poem

ತಾಯಿ

*ತಾಯಿ*
ಹೆಣ್ಣಾಗಿಯೂ ತಾಯಿಯಾಗದವಳು 
ಬಂಜೆ ಬಂಜೆ ಎಂದೆನಿಸಿಕೊಂಡು ಬೆಂದವಳು ನಾನು..
ತಾಯಿಯಾಗಲು ಹೋರಾಡಿ ಪರದಾಡಿ 
ಸೊತವಳು
ನಾಮಕರಣದ ಘಳಿಗೆಗೆ ಬಹಿಷ್ಕೃತಳು ನಾನು..
ತಾಯ್ತತನದ ಸಿಹಿ ನೊವಿಗೆ ಹಂಬಲಿಸಿ
ಕೊರಗಿದವಳು
ನಿಂದನೆಗಳ ಮಹಾಪೂರಕ್ಕೆ ಬಲಿಯಾದವಳು ನಾನು..
ಗರ್ಭ ತುಂಬಿದ ಖುಷಿಯಲ್ಲಿರುವಾಗಲೇ
ಗರ್ಭಪಾತದ ಕಹಿ ನೊವಿಗೆ ಗುರಿಯಾದವಳು ನಾನು..
ಅಮ್ಮ ಎಂದು ಕರೆಸಿಕೊಳ್ಳುವ ಭಾಗ್ಯವಿಲ್ಲದ ಭಾಗ್ಯಹೀನಳು ನಾನು
ತಾಯಿಯಾಗಿಯೂ ತಾಯಾಗದವಳು
ತಾಯಂದಿರ ದಿನದಂದು ತಣ್ಣಗೆ ಮಲಗಿರುವವಳು... 

By: ಅಗ್ನಿದಿವ್ಯ (ಅಮರೇಶ ಪಾಟೀಲ)

Comments[0] Likes[1] Shares[0]

Submit Your Comment

Latest Comments

No comments are available!