Poem

ವಾಸ್ತವ

ವಾಸ್ತವ

ಧರೆಯಲ್ಲಿ ರಕ್ತ ಪಿಪಾಸುಗಳೇ
ಹೆಚ್ಚುತ್ತಿದ್ದಾರೆ
ರಕ್ತ ಬೀಜಾಸುರನಂತೆ

ದುಡಿವವರ
ರಕ್ತ ಹೀರುತ್ತಿದ್ದಾರೆ
ಜಿಗಣೆಯಂತೆ

ದೀನದಲಿತರ
ನಿದ್ದೆ ಕಸಿದಿದ್ದಾರೆ
ತಿಗಣೆಯಂತೆ

ಜಾತಿ-ಮತವೆಂಬ
ಜಾಡ್ಯ ಅಂಟಿಸುತ್ತಿದ್ದಾರೆ
ಸೊಳ್ಳೆಯಂತೆ

ಇತ್ತೀಚೆಗೆ ವೈರಸ್‌
ಕೂಡ ಕಾದು ಕುಳಿತಿದೆ
ಆ್ಯಂಟಿ ವೈರಸ್ ಇಲ್ಲದ
ಬಡವರ ಬಲಿಗೆ

ಜನಸಾಮಾನ್ಯರನ್ನೇ ಟಾರ್ಗೆಟ್
ಮಾಡಿಕೊಂಡ ಜಿಗಣೆ-ತಿಗಣೆ
ಸೊಳ್ಳೆ-ವೈರಸ್ ಗಳಿಗೆ
ಅಂತಸ್ತಿನರಮನೆಯಲ್ಲಿ 
'ನೋ ಎಂಟ್ರಿ'

ಏಕೆಂದರೆ ಅವರ ಬಳಿ
ಜಿಗಣೆಗೆ 'ಗಂಬೂಟ್' ಇವೆ
ತಿಗಣೆಗೆ 'ಹಿಟ್' ಇದೆ
ಸೊಳ್ಳೆಗಳಿಗಂತೂ 'ಗುಡ್ ನೈಟ್' ಇದೆ
ಇನ್ನೂ ವೈರಸ್ ಗಳಿಗೆ 
'ಮಾಸ್ಕ್, ಕಿಟ್' ಇವೆ

ಉಳ್ಳವರ ಪುಂಡಾಟಕ್ಕೆ
ಬೇಲ್ ಬಿಡುಗಡೆ ಭಾಗ್ಯ
ಬಡವರ ಬದುಕಿನ ಹೆಣಗಾಟಕ್ಕೆ
ಖೇಲ್ ಖತಮ್ ನಾಟಕ ಬಂದ್
ಲೂಟಿ-ಲಾಠಿ ಭಾಗ್ಯ !

By: ಡಾ. ಶಿವಾನಂದ ಬ. ಟವಳಿ

Comments[5] Likes[11] Shares[2]

Submit Your Comment

Latest Comments

Vidya
Jul 08,2020

ಈಗಿನ ಸಂದರ್ಭಕ್ಕೆ ತಕ್ಕಂತೆ ಇದೆ..👌

Sachin
Jul 08,2020

Osm 🧡

ಸುನೀಲ್ ಗರಗ
Jul 08,2020

ತುಂಬಾ ಸೊಗಸಾಗಿದೆ ಗುರುಗಳೇ.

Arunaಎಸ್ ಜಿ ಅರುಣಾ
Jul 06,2020

Tumba chennagide gurugale