Poem

ವೀರ ಯೋಧರು

ನಡುಕಟ್ಟಿ ನಿಂತಿಹರು ಗಡಿ ಹೊಣೆಯ ಹೊತ್ತು
ಧೃಡ ಯೋಧರಿವರು ನಮ್ಮ ತಾಕತ್ತು

ತಡವಿದರೆ ತಡವಿರದೆ ಬಿಡದೆಲೇ ಬಡಿವರು
ಸುಡು ಬಿಸಿಲು ಸಿಡಿಲು ಮಳೆ ಲಕ್ಕಿಸದೆ ದುಡಿವರು
ಹುಡು-ಹುಡುಕಿ ವೈರಿಗಳ ಗಡಿದಾಟಿ ಹೊಡೆದರು
ಕಡಲ ಹಿರಿಯಲೆಯಂತೆ ಮುನ್ನುಗ್ಗಿ ನಡೆದರು

ಉತ್ತರದ ಕೃತ್ಯಕೆ ಉತ್ತರವನಿತ್ತಿಹರು
ಉತ್ತಮ ರಾಷ್ಟ್ರಕೆ ಪ್ರಾಣವನೆ ಕೊಟ್ಟಿಹರು
ಸತ್ತಿಲ್ಲ ಸೈನಿಕರು ಅತ್ತಿಲ್ಲ ಹೆತ್ತವರು
ಮತ್ತಷ್ಟು ವೀರರಿಗೆ ನೆತ್ತರವ ಬಿತ್ತಿಹರು

ಎದುರಿರುವ ಗುರಿಯದುವು ಎಂದೆಂದು ತಪ್ಪಿಲ್ಲ
ಬೆದರಿರುವ ಅರಿ ತಾನು ಗೆರೆಯನ್ನು ಮೀರಿಲ್ಲ
ಹೆದರಿಕೆಯು ಹೊರಗಿರುವ ವೈರಿಯದು ಇನ್ನಿಲ್ಲ
ವಿಧಿಬರಹವಿದು ಏನೋ ಬೆನ್ನಿಗೆ ಕಣ್ಣಿಲ್ಲ

ತನುದಾನ ಗೈದರಿಗೆ ಮನದಿಂದ ನಮನ
ನೆನೆಬೇಕು ಅನುದಿನವು ಈ ತ್ಯಾಗ ಬಲಿದಾನ
ಜನನಿಯು ತಾನೇ ಹರಸಿಹಳು ತುಂಬಿ ಮನ
ಜನುಮದ ಪಾವನಕೆ ಬೇಕೇನು ಕಾರಣ

By: ಪ್ರದೀಪ್‌ ದೇಶ್‌ಪಾಂಡೆ

Comments[63] Likes[195] Shares[17]

Submit Your Comment

Latest Comments

Apparao Kulkarni
Jul 21,2020

ಬಹಳ ಅದ್ಭುತವಾಗಿ ಮೂಡಿ ಬಂದಿದೆ.ಕಾವ್ಯ ಪ್ರಪಂಚ ತಮಗೆ ಕೈ ಮಾಡಿ ಕರೆಯುತಿದೆ.ಮುಂದುವರೆಯಿರಿ ಪ್ರದೀಪ..

Suhasini
Jul 14,2020

Super poem

Praveen Deshpande
Jul 14,2020

Superb

Anli
Jul 12,2020

Brilliant writing.👌

ANUP
Jul 12,2020

ಭಾಳ ಛಂದದ

Jagannath
Jul 12,2020

Wow.. Nice poem.. Continue write

Sagar
Jul 12,2020

Beautifully composed with usage of right words at right places

Pravin
Jul 12,2020

ತುಂಬಾ ಚೆನ್ನಾಗಿದೆ.

Vittal Bandi
Jul 12,2020

Very beautiful keep writing

Prem Sagar
Jul 12,2020

Nice poem.

Anjana
Jul 12,2020

Sakkataagide 👌

A. Walvekar
Jul 12,2020

Heart touching, Keep writing

Vinay
Jul 12,2020

Amazing kavite.

Balaji
Jul 11,2020

Super ,,👌👌👏

Namita
Jul 11,2020

Beautifully written👌👌

Ninaad
Jul 11,2020

ಪ್ರಾಸಬದ್ಧವಾಗ ಕವಿತೆ. ಚೆನ್ನಾಗಿದೆ

Amruta P
Jul 11,2020

ಸುಂದರ ಕವಿತೆ.

Asra
Jul 11,2020

Wonderful poem on our brave army

Santosh
Jul 11,2020

Amazing poem !!!

Aruna
Jul 10,2020

Beautifully written with nice rhyming words and deep meaning.

KARTIK
Jul 09,2020

Nice👌

Sarang
Jul 08,2020

ಅಪ್ಪಿ ಭಲ್ ಚಂದ್ ಬರ್ಡಿಡಿ ....

Narayan Kulkarni
Jul 08,2020

ಅತ್ಯುತಮ ಕವನ. ಶೈಲಿ ಚೆನ್ನಗಿದೆ.. ವೀರ ಯೋಧರಿಗೆ ನಿಮ್ಮ ನುಡಿ ನಮನ ಯೋಗ್ಯವಾಗಿದೆ.

Shree
Jul 08,2020

Good one Pradeep!! 😃

Sanjeev C Kulkarni
Jul 08,2020

Super, ನಮ್ಮ ಸೈನಿಕರ ಬಗ್ಗೆ ಬರೆದ ನಿಮ್ಮ ಕವಿತೆ ಅದ್ಭುತ.

Bhuvana
Jul 08,2020

Superb

Srinivasa K S
Jul 08,2020

Excellently written, by reading i can see picture infront of me, that's the power good poem

Vijay
Jul 08,2020

Tumba tumba chennagidey 👌👌👌

Vasudha S
Jul 08,2020

Thumbane chennagide! 🙂

Shridhar
Jul 08,2020

Amazing

Shubham Gumaste
Jul 08,2020

Well written

Amy Ozukum
Jul 08,2020

Beautifully written ❤️❤️. Continue to write more!!

beena walvekar
Jul 08,2020

tumba chennagi bardidira

Megha Walvekar
Jul 08,2020

Nicely written.... keep up the good work

KulkarniVijayHarshavardhan
Jul 08,2020

Good wruting.kindly keep writing to inspire.

Inchara
Jul 08,2020

This is beautifully written...

Neeta
Jul 06,2020

ನಮ್ಮ ಯೋಧರ ಕುರಿತಾದ ಅದ್ಭುತ ಕವಿತೆ..👌🏻👌🏻

Anindita
Jul 06,2020

This is amazing!!

Padmini
Jul 06,2020

Excellent Poem.. 👌🙏👏

Sanjeev Walvekar
Jul 06,2020

Excellent. Wish all the best to Mr. Pradeep.

Padmaja
Jul 06,2020

Very nice and by reading this I proud to have such brave soldiers😊😊😊😊

swiniTeja
Jul 06,2020

Nice poem

Raghavendra Beednal
Jul 06,2020

Super

SRIHARSHA K
Jul 06,2020

Excellent

ಚಿತ್ತಾಪೂರ ಶ್ರೀನಿವಾಸ
Jul 06,2020

ಅತ್ಯುತ್ತಮ ಕವನ. ದೇಶಭಕ್ತಿ ತುಂಬಿದ ಕವನ. ಸೈನಿಕರ ಶೌರ್ಯಕ್ಕೆ ನಮಿಸಿ ಹುರಿದುಂಬಿಸುವ ಕವನ. ವೀರ ಸೈನಿಕರ ಕೈಯಲ್ಲಿ ನಾವು ಮತ್ತು ನಮ್ಮ ದೇಶ ಸುರಕ್ಷಿತ ಎನ್ನುವ ಧೈರ್ಯ ತುಂಬುವ ಕವನ. ದ್ವಿತೀಯಾಕ್ಷರ ಪ್ರಾಸದೊಂದಿಗೆ ಅಂತ್ಯಾಕ್ಷರ ಪ್ರಾಸ ಜೋಡಿಸಿ ಹೆಣೆದ ಕವನ. ಅಭಿನಂದನೆಗಳು

Naveen K
Jul 06,2020

Awesome poem. I got goosebumps reading this. Bharath matha ki jai

Narendra
Jul 06,2020

Very nicely put Pradeep

Dr. S.S.Walvekar.
Jul 06,2020

Excellent. A real pattriot is one who inspires and create love for the nation which Mr pradeep has done for marvelously. Salute to you with you proud.

Narasimha Murthy
Jul 06,2020

Very nice and heart ❤️ touching poem. Keep it up and good bless you.

VM
Jul 06,2020

Tumba chennagidey