Poem

ವಿಜ್ಞಾನ

ಇದು ಜ್ಞಾನ 
ಜೀವ-ನಿರ್ಜೀವಗಳ ವಿಸ್ಮಯದ ಸುಜ್ಞಾನ 
ಶತಶತಮಾನದ ಜ್ಞಾನಿಗಳ ತಪಸಿನ ಮಹಾಜ್ಞಾನ 
ಭೂತದಿಂದ್ಹಿಡಿದು ಭವಿಷ್ಯತ್ತಿನ ಕಾಲಜ್ಞಾನ
ಇಳೆಯಿಂದ ನಭದಾಚೆಗೂ ಪಸರಿಸಿರುವ ವಿಜ್ಞಾನ 

ಇದು ಶಾಸ್ತ್ರ 
ಪ್ರಕೃತಿಯ ಅಗೋಚರ ಶಕ್ತಿಯ ವರ್ಣಿಸುವ 
ಜಂಗಮ-ಸ್ಥಾವರಗಳ ಭೌತಶಾಸ್ತ್ರ 
ಪಂಚಭೂತಗಳನೆ ಮೆರೆಸುವ 
ರಾಸಾಯನಿಕ ಪಾಕಗಳ ರಸಾಯನಶಾಸ್ತ್ರ 
ಜೀವಜಾಲವ ನೇಯ್ದು ವಿಕಸಿಸುವ 
ಸಕಲ ಜೀವರಾಶಿಗಳ ಜೀವಶಾಸ್ತ್ರ 
ಸಂಖ್ಯೆಗಳನು ಮುದ್ದಿಸುವ 
ಲೆಕ್ಕಾಚಾರಗಳ ಗಣಿತಶಾಸ್ತ್ರ 
ಅಂಧಶಾಸ್ತ್ರಕೆ ನಾಂದಿ ಹಾಡಿದ ವಿಜ್ಞಾನಶಾಸ್ತ್ರ 

ಇದು ಜ್ಯೋತಿ 
ಪ್ರತಿಕ್ಷಣವೂ ಪ್ರಜ್ವಲಿಸುವ ನಂದಾಜ್ಯೋತಿ 
ಚರಾಚರಗಳಲ್ಲೂ ಬೆರೆತಿರುವ ಜೀವಜ್ಯೋತಿ 
ಎಂದೆಂದಿಗೂ ಬತ್ತದ ಜ್ಞಾನಜ್ಯೋತಿ 
ಅಮರವು ಈ ಅಮೃತಜ್ಯೋತಿ

By: ಪ್ರಿಯಾಂಕ ಚಕ್ರಧರ

Comments[2] Likes[10] Shares[3]

Submit Your Comment

Latest Comments

Karan
Jul 06,2020

Nice super👌👌