'ಅಮೂಲ್ಯ ಪುಸ್ತಕ' ದಿನಾಂಕ 23 ಏಪ್ರಿಲ್ 2022: 'ವಿಶ್ವ ಪುಸ್ತಕ ದಿನ'ದಂದು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು. ಸದಭಿರುಚಿಯ ಪುಸ್ತಕಗಳನ್ನು ಆಸಕ್ತ ಓದುಗರಿಗೆ ತಲುಪಿಸುವ ಸದುದ್ದೇಶದಿಂದ ಆರಂಭಗೊಂಡಿದ್ದೇ 'ಅಮೂಲ್ಯ ಪುಸ್ತಕ', ದೂರದೂರುಗಳಲ್ಲಿರುವ ಅಸಂಖ್ಯಾತ ಸಾಹಿತ್ಯ ಸಂಶೋಧನಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ, ಮುಖ್ಯವಾಗಿ ವಿಮರ್ಶೆ, ಸಂಶೋಧನೆ, ಹಳಗನ್ನಡ, ಶಾಸನ, ನಾಟಕ, ಕಾವ್ಯ, ಅನುವಾದ ಪುಸ್ತಕಗಳು ಒಂದೇ ಸೂರಿನಡಿಯಲ್ಲಿ ಸಿಗಬೇಕೆನ್ನುವ ಮಹದಾಸೆಯಿಂದ ಪುಸ್ತಕ ಮಳಿಗೆ ಆರಂಭಿಸಿದೆ. ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಸಾವಿರಾರು ಸಾಹಿತ್ಯ ವಿದ್ಯಾರ್ಥಿಗಳು ಈ ಸದುಪಯೋಗವನ್ನು
'ಅಮೂಲ್ಯ ಪುಸ್ತಕ' ಪ್ರಕಟಣೆಯನ್ನು ಆರಂಭಿಸಿದ್ದು ಈಗಾಗಲೇ ಹಿರಿಯ ವೈದ್ಯರಾದ ಡಾ. ಲೀಲಾವತಿ ದೇವದಾಸ್ ಅವರ 'ದೇಹಾರೋಗ್ಯಕ್ಕೆ ಸಿರಿಧಾನ್ಯ ಆರೈಕೆ', ಹಿರಿಯ ವಾಗಿ ಡಾ. ಬಸವಾನಂದ ಸ್ವಾಮಿ ಸಾಲಿಮಠ ಅವರ 'ಅಧ್ಯಾತ್ಮದಲ್ಲಿ ಆತ್ಮದರ್ಶನ', ಮಾಹಿತಿ ಹಕ್ಕು ಮತ್ತು ಕಾನೂನು ತಜ್ಞರಾದ ವೈ.ಜಿ. ಮುರಳೀಧರನ್ ಅವರ 'ಅರ್ಥಹಿತ'(ಗ್ರಾಹಕರೇ, ನಿಮ್ಮ ಜೇಬು ಭದ್ರ.), ಮತ್ತು 'ಗ್ರಾಹಕ ಸಂರಕ್ಷಣಾ ಅಧಿನಿಯಮ-2019 ಒಂದು ಪರಿಚಯ, ಡಾ. ಎಸ್. ಸುನಂದ ಅವರ 'ಕೀರ್ತನ ಶರಭ'(ಯಲಿಯೂರು ಶ್ರೀ ವೆಂಕಟಾಚಲದಾಸರ ಜೀವನ ಮತ್ತು ಹರಿದಾಸ ಸಾಹಿತ್ಯಕ್ಕೆ ಅವರ ಕೊಡುಗೆ), ಅದ್ಯಾಪಕರು, ರಂಗಕರ್ಮಿ ಡಾ. ಬೇಲೂರು ರಘುನಂದನ್ ಅವರ ಮೊದಲನೇ ಕಥಾಸಂಕಲನ 'ದೇವರು ಕಾಣೆಯಾಗಿದ್ದಾನೆ', ವೃತ್ತಿಯಲ್ಲಿ ವೈದ್ಯರು ಪ್ರವೃತ್ತಿಯಲ್ಲಿ ಲೇಖಕರಾದ ಡಾ. ವಿ.ಎ. ಲಕ್ಷ್ಮಣ ಅವರ 'ಮಿಲ್ಲಿ ಟ್ರಂಕು' (ಸಮೃದ್ಧ ಬಾಲ್ಯ, ಚೂರು ಹರೆಯ) ಪುಸ್ತಕಗಳು ಪ್ರಕಟಗೊಂಡಿವೆ.
©2023 Book Brahma Private Limited.