ಬಹುವಚನ

ಕನ್ನಡ ಮತ್ತು ಅನ್ಯಭಾಷೆಗಳ ನಡುವೆ ಸಾಹಿತ್ಯಕೃತಿಗಳನ್ನು ಕೊಟ್ಟುಪಡೆಯುವ ಸಂತೋಷವನ್ನು ಪುಸ್ತಕ ಪ್ರಕಾಶದ ಮೂಲಕ ಹಂಚಲು ಮುಂದಾಗಿರುವ ಸಂಸ್ಥೆ ‘ಬಹುವಚನ’. ಇದೊಂದು ಅನುವಾದ ಕೇಂದ್ರಿತ ಯೋಜನೆ. ಪ್ರಸ್ತುತ ಕಾಲದ ಸಾಮೂಹಿಕ ಸ್ಮೃತಿಗೆ ಅಗತ್ಯವೆನಿಸುವ ಅನ್ಯಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರುವುದು, ವರ್ತಮಾನಕ್ಕೆ ಪ್ರಸ್ತುತವೆನಿಸುವ ಹಳೆಯ ಕನ್ನಡದ್ದೇ ಕೃತಿಗಳ ಮರು ಆವೃತ್ತಿಗಳನ್ನು ರೂಪಿಸುವುದು ಹಾಗೂ ಕನ್ನಡದಿಂದ ಹೊರಭಾಷೆಗಳಿಗೆ ಇಂಥ ಸಂಬಂಧ ಕಲ್ಪಿಸುವುದು ಮಾತ್ರವಲ್ಲ, ಈ ಸಂಗತಿಗಳಿಗೆ ಹೆಣೆದುಕೊಂಡಂತೆಯೇ ಹೊಸ ಕೃತಿಗಳನ್ನು ರೂಪಿಸುವುದು ಬಹುವಚನದ ಪ್ರಾರಂಭಿಕ ಉದ್ದೇಶ. ಜೊತೆಗೆ ಕನ್ನಡದ ವಿಶಿಷ್ಟ ಸ್ವತಂತ್ರ ಕೃತಿಗಳ ಪ್ರಕಟಣೆಯೂ ಮಾಡುತ್ತಿದೆ. ಸಾಹಿತ್ಯವು ಕಿಟಿಕಿಯಂತೆ ಅದೊಂದು ಜರಡಿ ಕೂಡ. ಸಾಹಿತ್ಯದ ಮೂಲಕ ಹಲವು ಜಗತ್ತುಗಳನ್ನು ಸಂಧಿಸುವುದು ‘ಬಹುವಚನ’ದ ಗುರಿ. ಹಲವು ಭಾಷೆಗಳ, ಹಲವು ಅನುಭವಗಳ ಪ್ರಪಂಚದೊಳಗೆ ಇಣಕುವ ಅವಕಾಶ. ಈ ಎಲ್ಲ ಚಿಂತನೆಗಳನ್ನು ‘ಬಹುವಚನ’ದ ಲಾಂಛನವು ಒಳಗೊಂಡಿದೆ. 

 

BOOKS BY BAHUVACHANA

ಬೀದಿ ಹೆಣ್ಣು

ದಿಗಂಬರ

ಜೀವ ಕೊಡಲೇ? ಚಹ ಕುಡಿಯಲೇ?

ಮೋಡದೊಡನೆ ಮಾತುಕತೆ

ಅನಾಮದಾಸನ ಕಡತ

ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್

Publisher Address

#61, ಸುಕೃತ, ದೇಸಾಯಿ ಗಾರ್ಡನ್ಸ್, ವಸಂತಪುರ ಮೈನ್ ರೋಡ್, ಬೆಂಗಳೂರು 560062

#61, Sukrita, Desai Gardens, Vasantpur Main Road, Bangalore 560062

Publisher Contact

6362588659