ಕನ್ನಡ ಸಾರಸ್ವತ ಲೋಕಕ್ಕೆ ಮೈಸೂರಿನ ಡಿ.ವಿ.ಕೆ ಮೂರ್ತಿ ಪ್ರಕಾಶನದ್ದು ಮಹತ್ವದ ಕೊಡುಗೆ. ಅರ್ಥಶಾಸ್ತ್ರದಲ್ಲಿ ಸಂಶೋಧನೆಯಂಥ ಅವಕಾಶವನ್ನೂ ಬಿಟ್ಟುಕೊಟ್ಟು ಪುಸ್ತಕ ಪ್ರಕಾಶನಕ್ಕೆ ಇಳಿದ ಡಿ.ವಿ.ಕೆ ಮೂರ್ತಿ, ತಮ್ಮ ವಿದ್ವತ್ತು ಮತ್ತು ಓದಿನ ವಿಸ್ತಾರವನ್ನು ಈ ಕ್ಷೇತ್ರದಲ್ಲಿ ತೊಡಗಿಸಿದರು. ಅವರು ತಂದಿರುವ ಪ್ರಕಟಣೆಗಳೇ ಪ್ರಕಾಶನವನ್ನು ಅವರು ಜೀವನಮೌಲ್ಯವನ್ನಾಗಿ ಮಾಡಿಕೊಂಡಿದ್ದುದಕ್ಕೆ ಸಾಕ್ಷಿ.
ಸ್ವತಃ ಬರಹಗಾರರಾಗಿದ್ದ ಡಿ.ವಿ.ಕೆ. ಮೂರ್ತಿ ಅವರು ಕನ್ನಡದ ಅನೇಕ ಮಹತ್ವದ ಪ್ರಕಟಣೆಗಳಿಗೆ ಕಾರಣರಾದವರು. ಇತರ ಪ್ರಕಾಶನ ಸಂಸ್ಥೆಗಳನ್ನು ಬೆಳೆಸುವುದರಲ್ಲೂ ಅವರ ಕಾಳಜಿ, ಬೆಂಬಲ ಅಪಾರ.
ಆರು ದಶಕಗಳಿಂದ ಪ್ರಕಾಶನದಲ್ಲಿ ತೊಡಗಿಸಿಕೊಂಡಿರುವ ಡಿ.ವಿ.ಕೆ. ಮೂರ್ತಿ ಪ್ರಕಾಶನ ಕಡಿಮೆ ಬೆಲೆಯಲ್ಲಿ ಉತ್ತಮ ಪುಸ್ತಕಗಳನ್ನು ಕೊಡುವ ಮೂಲಕ, ತನ್ನ ಸದಾಶಯವನ್ನು ಕಾಫಾಡಿಕೊಂಡು ಬಂದ ಸಂಸ್ಥೆ. 2004ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ನೀಡಿ ಗೌರವಿಸಿದೆ.
©2023 Book Brahma Private Limited.