ಪ್ರಗತಿಪರ ವಿಚಾರಧಾರೆಯ ಕೃತಿಗಳನ್ನು ಎಲ್ಲರಿಗೂ ಕೈಗೆಟಕುವ ದರದಲ್ಲಿ ಪ್ರಕಟಿಸುವ ಉದ್ದೇಶದೊಂದಿಗೆ ಸಮಾನ ಮನಸ್ಕರು ಸೇರಿ ಕಟ್ಟಿರುವ ಸಂಸ್ಥೆ ಜನ ಪ್ರಕಾಶನ. ಜನಸಮುದಾಯವನ್ನು ಜಾಗೃತಗೊಳಿಸುವ ಆಶಯ ಇದರ ಪ್ರಕಟಣೆಗಳ ಹಿಂದಿದೆ.
ಸಂಸ್ಕೃತಿ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ, ಸಾಮಾಜಿಕ ನ್ಯಾಯದ ಸಮಗ್ರ ತಿಳುವಳಿಕೆ ಇಂಥ ಧ್ಯೇಯದೊಂದಿಗೆ ಹಲವಾರು ಕೃತಿಗಳನ್ನು ಜನ ಪ್ರಕಾಶನ ಪ್ರಕಟಿಸಿದೆ. ಸಂಶೋಧಿತ, ಸಂಪಾದಿತ ಮಾತ್ರವಲ್ಲದೆ, ಸಾಹಿತ್ಯಕ ಕೃತಿಗಳೂ ಜನ ಪ್ರಕಾಶನದಿಂದ ಪ್ರಕಟಗೊಂಡಿವೆ.
©2022 Book Brahma Private Limited.