ಜ್ಞಾನಪೀಠ ಪ್ರಶಸ್ತಿ, ರಾಜ್ಯ, ರಾಷ್ಟ್ರಮಟ್ಟದ ಸಾಹಿತ್ಯ ಪ್ರಶಸ್ತಿ ಪುರಸ್ಕೃತರ ಮತ್ತು ಶ್ರೇಷ್ಠ ಸಾಹಿತಿಗಳ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕ ಭಾಷೆಗಳಲ್ಲಿ ಅನುವಾದಿವುದು ಹಾಗೂ ಇತರ ರಾಷ್ಟ್ರೀಯ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತರುವ ಉದ್ದೇಶದಿಂದ ಸ್ಥಾಪಿತವಾಗಿರುವುದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ವಿಶ್ವ ಸಾಹಿತ್ಯವನ್ನು ಕನ್ನಡದಲ್ಲಿ ತರುವ ಕೆಲಸದಲ್ಲಿಯೂ ಇದು ನಿರತವಾಗಿದೆ.
ಈ ಪ್ರಾಧಿಕಾರದ ಅಂಗವಾಗಿ ಸ್ಥಾಪಿಸಲಾಗಿರುವ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ 50ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳ ಸಂಪುಟ ಸೇರಿದಂತೆ ಹಲವು ಮಹತ್ವದ ಪ್ರಕಟಣೆಗಳು ಪ್ರಾಧಿಕಾರದಿಂದ ಬಂದಿವೆ.
‘ಕುವೆಂಪು ಸಂಚಯ’ ಮತ್ತು ‘ಪು.ತಿ.ನ ಸಂಚಯ’ಗಳನ್ನು ಹೊರತರಲಾಗಿದ್ದು, ಇವುಗಳ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳನ್ನು ಕೂಡ ಪ್ರಾಧಿಕಾರ ಹೊರತರಲಿದೆ. ಇದೇ ಮಾದರಿಯಲ್ಲಿಯೇ ‘ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸಂಚಯ’,‘ಗೋಕಾಕ್ ಸಂಚಯ’,‘ಮಾಸ್ತಿ ಸಂಚಯ’,‘ಕಾರಂತ ಸಂಚಯ’ ಮತ್ತು ‘ಯು.ಆರ್.ಅನಂತಮೂರ್ತಿ ಸಂಚಯ’ ಪ್ರಕಟಿಸುವ ನಿಟ್ಟಿನಲ್ಲಿಯೂ ಪ್ರಾಧಿಕಾರ ಕೆಲಸ ಮಾಡುತ್ತಿದೆ.©2022 Book Brahma Private Limited.