ಸಾಹಿತ್ಯ ಪ್ರಕಾಶನ

ಸ್ವತಃ ಲೇಖಕರಾಗಿರುವ ಎ. ಎಂ. ಸುಬ್ರಹ್ಮಣ್ಯ ಅವರ ಪುಸ್ತಕ ಶ್ರದ್ಧೆಯ ಪರಿಣಾಮವಾಗಿ1986ರಲ್ಲಿ ಆರಂಭವಾದ ಸಾಹಿತ್ಯ ಪ್ರಕಾಶನ, ಕಷ್ಟದ ಹಾದಿಯಲ್ಲೇ ನಡೆದು ಮಹತ್ವವಾದುದನ್ನು ಸಾಧಿಸಿದ ಸಂಸ್ಥೆ. ತಂದೆಯವರಾದ ಎಂ. ಅನಂತಮೂರ್ತಿ ಮತ್ತು ದೊಡ್ಡಪ್ಪ ಎಂ ಗೋವಿಂದರಾಯರು ಸಾಹಿತ್ಯ ಭಂಡಾರ ಪ್ರಕಾಶನ ಸಂಸ್ಥೆ ಮೂಲಕ ತೋರಿಸಿದ್ದ ಹಾದಿಯನ್ನೇ ಮಾದರಿಯಾಗಿಟ್ಟುಕೊಂಡು ಸಾಹಿತ್ಯ ಪ್ರಕಾಶನವನ್ನು ಕಟ್ಟಿ ಬೆಳೆಸಿದರು ಸುಬ್ರಹ್ಮಣ್ಯ ಅವರು.

ಯಂಡಮೂರಿಯವರ ’ಕರಿಗಂಬಳಿಯಲ್ಲಿ ಮಿಡಿನಾಗ’ ಎಂಬ ಕೃತಿಯೊಂದಿಗೆ ಆರಂಭಿಸಿ, 700ಕ್ಕೂ ಹೆಚ್ಚು ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸಿದೆ ಸಾಹಿತ್ಯ ಪ್ರಕಾಶನ. ಕೆ. ಎಸ್. ನಾರಾಯಣಾಚಾರ್ಯರದ್ದೇ 100 ಕೃತಿಗಳು ಸಾಹಿತ್ಯ ಪ್ರಕಾಶನದಿಂದ ಹೊರಬಂದಿವೆ. ಪುಸ್ತಕಗಳ ಮಾರಾಟದಲ್ಲೂ ಬೆರಗುಗೊಳಿಸುವ ಸಾಧನೆ.

ಪ್ರಕಾಶನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಹಿತ್ಯ ಪ್ರಕಾಶನಕ್ಕೆ, ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ 2021ರಲ್ಲಿ ಸಂದಿದೆ.

BOOKS BY SAHITYA PRAKASHANA

ಬಿಟ್ಟು ಬಂದಳ್ಳಿಯ ಕಥೆಗಳು

ಕ್ರಾಂತಿ ಪರ್ವ

ನನ್ನ ಐವತ್ತೊಂದು ಕವಿತೆಗಳು

ತ್ರಿಕೋಣ ಪ್ರೇಮ ತಂದ ದುರಂತ

ಶಿಖಂಡಿ

ನಾನು ಕಂಡ ಅಮೇರಿಕೆ

ತೂರಿದ ಚಿಂತನಗಳು

ನನ್ನದಲ್ಲದ್ದು

Publisher Address

ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‍ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.

Koppikar Rd, New Hubli, Hubballi, Karnataka 580020.

Website

sahityaprakashan.com

Publisher Contact

094481 10034

Email

sahityaprakashana1986@gmail.com