1968ರಲ್ಲಿ ತ.ಸು. ಶಾಮರಾಯರು ಸ್ಥಾಪಿಸಿದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯನ್ನು ಅವರ ಪುತ್ರ ಟಿ.ಎಸ್. ಛಾಯಾಪತಿ ಮುನ್ನಡೆಸುತ್ತಿದ್ದಾರೆ. ಸ್ವತಃ ಲೇಖಕರೂ ಆಗಿರುವ ಛಾಯಾಪತಿಯವರು, ಪುಸ್ತಕ ಪ್ರಕಟಣೆಯನ್ನು ಪ್ರೀತಿಯಿಂದ ಮುಂದುವರಿಸಿದವರು. ಈವರೆಗೆ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ, ಹಾ.ಮಾ.ನಾಯಕ್, ದೇಜಗೌ, ನಿಸಾರ್ ಅಹಮದ್, ಮತ್ತೂರು ಕೃಷ್ಣಮೂರ್ತಿ, ಎಚ್.ಎಸ್.ವೆಂಕಟೇಶಮೂರ್ತಿ ಮೊದಲಾದವರ ಕೃತಿಗಳು ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಿಂದ ಪ್ರಕಟವಾಗಿವೆ.
ಛಾಯಾಪತಿಯವರು ಹಲವಾರು ಗೌರವಗಳಿಗೆ ಪಾತ್ರರಾಗಿದ್ದು, ಮೈಸೂರಿನ ಭಾರತಿ ವಿದ್ಯಾ ಭವನದಿಂದ ಶ್ರೇಷ್ಠ ಕನ್ನಡ ಪ್ರಕಾಶಕ ಪ್ರಶಸ್ತಿ ಸಂದಿದೆ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಬಂದಿದೆ.
©2022 Book Brahma Private Limited.