ವಿಕ್ರಂ ಪ್ರಕಾಶನ 1993 ರಲ್ಲಿ ಪ್ರಾರಂಭವಾದ ಸಂಸ್ಥೆ. ಪ್ರಕಾಶಕಿಯ ಹೆಸರು ನಂದಾ ಹರಿಪ್ರಸಾದ್. ಖ್ಯಾತ ಲೇಖಕಿ ಕುಮುದಾ ಅವರ 'ಸಂಜೆ ರಂಗ ಆರತಿಯಾಯ್ತು' ಕೃತಿಯ ಮೂಲಕ ಪ್ರಕಾಶನ ಲೋಕಕ್ಕೆ ಹೆಜ್ಜೆಯೂರಿತು. ಪ್ರಾರಂಭದಲ್ಲಿ ಜನಪ್ರಿಯ ಕಾದಂಬರಿಕಾರರಾದ ಯಂಡಮೂರಿ ವಿರೇಂದ್ರ ನಾಥ್, ಮಲ್ಲಾದಿ ವೆಂಕಟಕೃಷ್ಣಮೂರ್ತಿ ಅವರ ಅನುವಾದಿತ ಕೃತಿಗಳನ್ನು ಪ್ರಕಟಿಸಿತು. ಎಂ.ಎಲ್. ರಾಘವೇಂದ್ರ ರಾವ್, ಎಸ್.ಡಿ.ಕುಮಾರ್ ಅವರು ಈ ಕೃತಿಗಳ ಅನುವಾದಕರು. ಸಾ.ಕೃ.ಪ್ರಕಾಶ ಅವರ ಹಾಸ್ಯ ಲೇಖನಗಳು ನಂತರ ಅವರ ಕಾದಂಬರಿಗಳನ್ನು ಪ್ರಕಟಿಸಿತು. ಹೆಚ್.ಜಿ.ರಾಧಾದೇವಿ, ಈಚನೂರು ಜಯಲಕ್ಷ್ಮಿ, ಕುಮುದ ಅವರ ಕಾದಂಬರಿಗಳನು ಪ್ರಕಟಿಸಿದೆ. 2006 ರ ನಂತರ ಕಾದಂಬರೇತರ ಸಾಹಿತ್ಯಗಳಾದ ಪ್ರಚಲಿತ ಅಂಕಣ ಬರಹಗಳು, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಐತಿಹಾಸಿ ಮತ್ತು ಪೌರಾಣಿಕ ಕಾದಂಬರಿಗಳನ್ನು ಪ್ರಕಟಿಸಿದೆ.
ಅದರಲ್ಲಿ ಕೆಲವು ಚಕ್ರವರ್ತಿ ಸೂಲಿಬೆಲೆ ಅವರ ಜಾಗೋ ಭಾರತ್ 7 ಸಂಪುಟಗಳು, ವಿಶ್ವ ಗುರು 2 ಸಂಪುಟಗಳು, ಕಾರ್ಗಿಲ್ ಕದನ ಕಥನ ಮಾಸ್ಟರ್ ಹಿರಣ್ಣಯ್ಯ ಅವರ ಆತ್ಮಕಥೆ 'ನಾನು ಮಾಸ್ಟರ್ ಹಿರಣ್ಣಯ್ಯ-ನನ್ನ ಕಥೆ ಹೇಳ್ತೀನಿ', ಸಂಧ್ಯಾ ಪೈ ಅವರ 'ಪ್ರಿಯ ಓದುಗರೇ' 7 ರಿಂದ11 ಸಂಪುಟಗಳು. 'ಕಲ್ಲು ಸಕ್ಕರೆ ಮಕ್ಕಳ ಕಥೆಗಳ ಕಥಾಗುಚ್ಛ 5 ಸಂಪುಟಗಳಲ್ಲಿ ಬಂದಿರುತ್ತದೆ. ಡಾ.ಡಿ.ವಿ.ಗುರುಪ್ರಸಾದ್ ಅವರ ನಾಲ್ಕು ಕೃತಿಗಳಾದ ಅಪರೇಷನ್ ತ್ರಿಶೂಲ,ಅಪರಾಧಗಳ ಬೆನ್ನತ್ತಿ, ಸಿಸ್ಟರ್ ಅಭಯ ಸಾವು ಕೊಲೆಯೋ ಆತ್ಮಹತ್ಯೆಯೋ, ಧರ್ಮಾತ್ಮ ಧರ್ಮಸಿಂಗ್ ಇಲ್ಲಿ ಮುದ್ರಣಗೊಂಡಿವೆ.
©2023 Book Brahma Private Limited.