ಹಾವನೂರ ವರದಿಯಿಂದ ಸಾಮಾಜಿಕ ಬದಲಾವಣೆ :ಜಯಪ್ರಕಾಶ್‌ ಹೆಗ್ಡೆ

Date: 07-01-2023

Location: ಹಾವೇರಿ


ಹಾವನೂರರ ವರದಿ ಅನುಷ್ಠಾನದಿಂದ ಸಾಮಾಜಿಕ ಬದಲಾವಣೆ ಆಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಅಭಿಪ್ರಾಯಪಟ್ಟಿದ್ದಾರೆ.

ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕನ್ನಡಪರ ಮತ್ತು ಪಗ್ರತಿಪರ ವರದಿಗಳ ಅನುಷ್ಠಾನದ ಗೋಷ್ಠಿಯಲ್ಲಿ ಭಾಗವಹಿಸಿ ಎಲ್.ಜಿ.ಹಾವನೂರು ವರದಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಮಾತನಾಡಿದರು.

ಎಲ್.ಜಿ. ಹಾವನೂರು ವರದಿಯನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಬೈಬಲ್ ಎಂದು ಬಣ್ಣಿಸಿದ್ದರು. ಸರ್ವೊಚ್ಛ ನ್ಯಾಯಲಯವು ವರದಿಯನ್ನು ಹಿಂದುಳಿದ ವರ್ಗಗಳ ನಿಖರವಾದ ಅಂಶಗಳ ಅಧ್ಯಯನ ಎಂದಿತು. ಈ ವರದಿ ಬಿ.ಪಿ.ಮಂಡಲ್ ಆಯೋಗಕ್ಕೂ ಮಾನದಂಡವಾಗಿ ಕಾರ್ಯನಿರ್ವಹಿಸಿದೆ. ವರಿದಿಯ ಸಂಪೂರ್ಣ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ ಉಂಟಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

"ಎಲ್.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಏಳಿಗೆ ನೀಡಿದ ಕೊಡುಗೆ ಅಪಾರ " ಎಲ್.ಜಿ.ಹಾವನೂರು ನೇತೃತ್ವದ ಆಯೋಗ ರಾಜ್ಯದ 180 ನಗರ ಹಾಗೂ 190 ಗ್ರಾಮೀಣ ಭಾಗದ ಬ್ಲಾಕ್‌ಗಳಲ್ಲಿ ಸಂಚರಿಸಿ 63 ಸಾವಿರ ಕುಟುಂಬಗಳ 3 ಲಕ್ಷ ಹಿಂದುಳಿದ ವರ್ಗಗಳ ಜನರ ಸಮಿಕ್ಷೆಯನ್ನು ನಡೆಸಿತು. 1972ರ ಎಸ್.ಎಸ್.ಎಲ್.ಸಿ ಪರೀಕ್ಷೆ ಮಾನದಂಡ ಆಧರಿಸಿ ಹಿಂದುಳಿದ ವರ್ಗಗಳ ಜಾತಿಗಳನ್ನು ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಜಾತಿಗಳಲ್ಲಿ ವಿಭಾಗ ಮಾಡಿತು. ಹಿಂದುಳಿದ ವರ್ಗಗಳಿಗಾಗಿಗೆ ಪ್ರತ್ಯೇಕ ಮಂತ್ರಿ, ಆಯುಕ್ತಾಲಯ, ಇಲಾಖೆ ಹಾಗೂ ಪ್ರತ್ಯೇಕ ನಿಗಮಗಳ ಸ್ಥಾಪನೆಗೆ ಶಿಫಾರಸ್ಸು ಮಾಡಿತು. ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಶಾಲೆ ಹಾಗೂ ಹಾಸ್ಟೆಲ್‌ಗಳನ್ನು ತೆರೆಯಲು ಸೂಚಿಸಿತು. ಆಯೋಗ ಅಧ್ಯಕ್ಷ ಎಲ್.ಜಿ.ಹಾವನೂರು ಅವರನ್ನು ಸರ್ಕಾರದಲ್ಲಿ ಮಂತ್ರಿಗಳನ್ನು ಮಾಡಿ ದೇವರಾಜ ಅರಸು ಅವರು ವರದಿಯ ಸಂಪೂರ್ಣವಾಗಿ ಅನುಷ್ಠಾನವಾಗುವಂತೆ ನೋಡಿಕೊಂಡರು.

ಎಲ್.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಏಳಿಗೆ ನೀಡಿದ ಕೊಡುಗೆಯನ್ನು ಗಮನಿಸಿ ನೆಲ್ಸ್‌ನ್‌ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಸಂವಿಧಾನ ರಚನೆಯ ಸಲಹೆಗಾರರನ್ನಾಗಿ ಎಲ್.ಜಿ.ಹಾವನೂರು ಅವರನ್ನು ನೇಮಿಸಿದರು. ಇದು ನಮ್ಮೆಲರಿಗೂ ಹೆಮ್ಮ ಪಡಬೇಕಾದ ವಿಷಯ ಎಂದರು.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...