ಕನ್ನಡ ಸಮಗ್ರ ಪಾರಿಭಾಷಿಕ ಶಬ್ಧಕೋಶ ರಚನೆಯಾಗಲಿ: ದೊಡ್ಡರಂಗೇಗೌಡ

Date: 06-01-2023

Location: ಹಾವೇರಿ


ಮರೆತು ಹೋಗಿರುವ, ತಾಂತ್ರಿಕ, ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಬಲ್ಲ ಪದಗಳನ್ನು ಹೆಕ್ಕುವ ಸಲುವಾಗಿ ಕನ್ನಡ ಸಮಗ್ರ ಪಾರಿಭಾಷಿಕ ಶಬ್ಧಕೋಶ ರಚನೆಯಾಗಲಿ ಎಂದು ಸಾಹಿತಿ ದೊಡ್ಡರಂಗೇಗೌಡರು ಅಭಿಪ್ರಾಯಪಟ್ಟಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ ಪದವಿಪೂರ್ವ ಹಂತದಲ್ಲಿ ವಿಜ್ಞಾನದ ವಿಷಯ ಪುಸ್ತಕಗಳನ್ನು ಕನ್ನಡಕ್ಕೆ ತರುವ ಕೆಲಸಕ್ಕೆ ಕೈ ಹಾಕಿತ್ತು. ಆದರೆ, ಇಂತಹ ಕೆಲಸಗಳು ಒಂದಿಲ್ಲೊಂದು ಕಾರಣದಿಂದಾಗಿ ಪ್ರಾಯೋಗಿಕ ಹಂತಕ್ಕೆ ಮಾತ್ರವೇ ಸೀಮಿತಗೊಂಡವು. ನಿರಂತರವಾಗಿ ಮುಂದುವರೆಯಲಿಲ್ಲ.

ಈ ಬಾರಿ ಮೊದಲಿಗೆ ಚಿರಸ್ಥಾಯಿಯಾಗಿ ಉಳಿಯುವಂತಹ ಒಂದು ‘ಕನ್ನಡ ಸಮಗ್ರ ಪಾರಿಭಾಷಿಕ ಶಬ್ದಕೋಶ'ವನ್ನು ನಾವು ನಿರ್ಮಿಸಬೇಕು. ಬಳಕೆಯಿಂದ ಮರೆತು ಹೋಗಿರುವ ಅದರ ಇಂದಿನ ತಾಂತ್ರಿಕ, ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಬಲ್ಲ ಪದಗಳನ್ನು ಹೆಕ್ಕುವುದು ಯೋಜನೆಯ ಒಂದು ಭಾಗ. ವಿಜ್ಞಾನ, ತಂತ್ರಜ್ಞಾನಗಳು ಬೆಳವಣಿಗೆಯಾದಂತೆ ಅದಕ್ಕೆ ಅನುಗುಣವಾಗಿ ಮೂಡುವ ಪಾರಿಭಾಷಿಕ ಪದಗಳು ಹಾಗೂ ಆಧುನಿಕ ಸಂಸ್ಕೃತಿ, ನಡೆನುಡಿಯಿಂದ ಜಾಗತಿಕ ಸ್ತರದಲ್ಲಿ ಮೂಡುವ ಹೊಸಪದಗಳಿಗೆ, ಅಗತ್ಯಗಳಿಗೆ ಸಂವಾದಿಯಾಗಿ ನವೀನ ಪದಗಳನ್ನು ಕಟ್ಟುವುದು ಇದರ ಮತ್ತೊಂದು ಕೆಲಸ.

ತಮಿಳುನಾಡಿನಲ್ಲಿ ಕೆಲ ವರ್ಷದ ಹಿಂದೆ ಅಲ್ಲಿನ ಸರ್ಕಾರ ಕನ್ನಡದಲ್ಲಿ ಶಬ್ದ ಭಂಡಾರ ಎನ್ನುವುದು ಸಮೀಪದ ಅರ್ಥ ಎನ್ನುವ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲ ಉದ್ದೇಶ ವಿಭಿನ್ನ ಜ್ಞಾನಶಿಸ್ತುಗಳಲ್ಲಿನ ಪಾರಿಭಾಷಿಕ ಪದಗಳಿಗೆ ತಮಿಳು ಸಂವಾದಿ ಪದಗಳನ್ನು ಹೆಕ್ಕುವುದು, ರೂಪಿಸುವುದು, ಕಟ್ಟುವುದಾಗಿದೆ.

ಈ ಯೋಜನೆಗೆ ಚಾಲನೆ ದೊರೆತ ಕೆಲ ವರ್ಷಗಳಲ್ಲಿಯೇ ಹತ್ತಾರು ಸಾವಿರ ಪದಗಳನ್ನು ಹೆಕ್ಕಿರುವ, ಕಟ್ಟಿರುವ ಉದಾಹರಣೆ ಅಲ್ಲಿನದು. ಇಂತಹ ಭಂಡಾರವೊಂದು ಕನ್ನಡದಲ್ಲಿ, ಅದೂ ಅಂತರ್ಜಾಲದ ಜಗತ್ತಿನಲ್ಲಿ ಅತ್ಯಗತ್ಯವಾಗಿ ಆಗಬೇಕು. ಅದರ ತಾಂತ್ರಿಕ ಅಂಶಗಳು ಹೇಗಿರಬೇಕು ಎನ್ನುವುದು ಅಕಾಡೆಮಿಕ್ ಆದ ಚರ್ಚೆ. ಆದರೆ, ಅಂತಹ ಕೆಲಸ ಅಗತ್ಯವಾಗಿ ಆಗಬೇಕಿದೆ ಎಂದು ಅವರು ಆಗ್ರಹಿಸಿದರು.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...