Poem

ಬದುಕಿಬಿಡು ಜೀವವೇ ನಿನ್ನಿಷ್ಟದಂತೆ

ಬದುಕಿಬಿಡು ಜೀವವೇ ನಿನ್ನಿಷ್ಟದಂತೆ
ಜಗದ ಅಂತೆಕಂತೆಗಳಿಗೆ ಕಿವಿಗೊಡದಂತೆ
ನಿನ್ನ ಆತ್ಮಸಾಕ್ಷಿಗೆ ಸರಿಯೆನಿಸುವಂತೆ
ನಿನ್ನ ಬದುಕು ಬಡವಾಗದಂತೆ
ನೀ ಅತ್ತಿದ್ದು ನೀ ಒಳಗೊಳಗೇ ಸತ್ತಿದ್ದು
ನಿನಗಷ್ಟೆ ತಿಳಿದಿದೆ
ಹೀಗೊಮ್ಮೆ ಬದುಕಿಬಿಡು
ಬಂಧನದ ಮಿತಿಯೇ ಇಲ್ಲದಂತೆ
ನಿನ್ನ ಖುಷಿಗಷ್ಟೇ ನೀ ಮಗಳಾಗುವಂತೆ
ಪದೇ ಪದೇ ನಿನ್ನ ಮೇಲೆ ನಿನಗೆ ಪ್ರೀತಿ ಎಕ್ಕುವಂತೆ
ನೀ ಹೇಗಿದ್ದರೂ ಕಷ್ಟವೆನ್ನುವ ಜನರ ನಡುವೆ
ಒಮ್ಮೊಮ್ಮೆ ಕಿವುಡನಾಗಿ ಇದ್ದುಬಿಡು.
ನೀ ಬದುಕುವ ರೀತಿ ಕಂಡು ಅವರೇ
ಮೂಕರಾಗಿ ಬಿಡಲಿ
ನೀ ಬದುಕಿಬಿಡು ನೈಜತೆಯ ಮಹಾರಾಣಿಯಂತೆ
ನೀ ಬದುಕಿಬಿಡು ನೈಜತೆಯ ಮಹಾರಾಣಿಯೆನ್ನುವಂತೆ

-ಸುಧಾರಾಣಿ ಟಿ.

ಸುಧಾರಾಣಿ ಟಿ

ಸುಧಾರಾಣಿ ಟಿ ಅವರು ಪೋಲಿಸ್ ಉಪ ನಿರೀಕ್ಷಕರು. ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಭಿರುಚಿ ಹೊಂದಿರುವ ಅವರು ಕವಿತೆ ಹಾಗೂ ಬರವಣಿಗೆಯನ್ನು ತಮ್ಮ ಹವ್ಯಾಸವಾಗಿಸಿ ಕೊಂಡಿದ್ದಾರೆ.

More About Author