Poem

ದಿಗಂತ

ರಾತ್ರಿ,
ಪೂರ್ಣ ಚಂದಿರ ಹಲ್ಲು ಕಿಸಿದು
ದಿಟ್ಟಿಸಿದ,
ನಾನೋ ಹೊತ್ತು ಗೊತ್ತಿಲ್ಲದ ನಿಶಾಚರಿ,
ಎದೆಯಲಿ ಸದಾ ಶಾಂತಿ ಬಯಕೆ ಹೊತ್ತವ.

ಅವಳು ನನ್ನಂತೆಯೆ,
ಕಾಲದೊಟ್ಟಿಗೆ
ಜೂಟಾಟ ಆಡುವಳು.
ಬೆಳಗುವ ಸೂರ್ಯನ ಶಪಿಸಿ
ಕತ್ತಲೇನಲ್ಲಿ ನಿರಾಳವಾಗುತ್ತಾಳೆ.
ಒಮೊಮ್ಮೆ,
ಚಂದಿರನನ್ನು ತೊರೆದು ಅಂತರ್ಮುಖಿಯಾಗುತ್ತಾಳೆ.

ಇನ್ನು ಪ್ರೀತಿ,
ನಮ್ಮ ಧರ್ಮ
ಆಚರಣೆಯಲ್ಲಿ ವಿಭಿನ್ನ,
ಸುತ್ತಲೊಂದು ಗೋಡೆ ಕಟ್ಟಿದೆ
ಅವಳು-ನಾನು ದೂರ
ಪ್ರೀತಿಗೆ ಯಾವಾ
ಅಡೇ-ತಡೆ, ಕಟ್ಟಪ್ಪಣೆ
ಮುಕ್ತ ಬಯಲ ಹೆಣೆದು
ಆ ದೂರದ ಕಡಲಾಚೆ ಶೂನ್ಯವನ್ನು ತಟ್ಟುತ್ತೇನೆ.

ಪ್ರಶ್ನೆಗಳಿವೆ
ಬದುಕಿನ ಪ್ರತಿ ಹೆಜ್ಜೆಯಲ್ಲು.
ತೆರೆ ತಟ್ಟಿದ ದಂಡೆಯ ಎದೆಯೊಳಗೆ ಉತ್ತರ ಹುಡುಕುತ್ತೇನೆ.
ಆಗಲಾದರೂ
ನನಗೆ ಅರಿವಾಗಬೇಕು
ದಿಗಂತ ಸುಳ್ಳು ಎಂದು.

 

ಬಸಂತ್ ಡಿ. ಉಮಾಪತಿ

ಬಸಂತ್ ಡಿ. ಉಮಾಪತಿ ಅವರು ಮೂಲತಃ ಕೊಟ್ಟೂರೇಶ್ವರದವರು. ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಅವರು ಕೊಟ್ಟೂರೇಶ್ವರ ಪಿ. ಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕತೆ ಕವಿತೆ ಬರೆಯುವುದು ಅವರ ಹವ್ಯಾಸವಾಗಿದೆ.

More About Author