Poem

ಗಝಲ್

ಅರಿತನ ಮರೆತು ಕುರಿತೋದುತ
ಖುಷಿಯಾಗು ಮನವ ತೆರೆದು ನೀನು/
ಸಿರಿತನ ಬಯಸಿ ಮುಖವಾಡ ಧರಿಸಿ
ವಂಚಿಸಿದೆ ಬಳಿಗೆ ಕರೆದು ನೀನು//

ನಾಳಿನ ದಿನಗಳಿಗೆ ದ್ವೇಷವನ್ನು ಬಿಡದೆ
ಹೊತ್ತು ಸಾಗುತ್ತಿರುವೆಯಲ್ಲ ಏಕೆ/
ಬಾಳಿನ ದಾರಿಯು ಸ್ನೇಹ ಪ್ರೀತಿಯಿಂದ
ಕೂಡಿರಲಿ ಅಹಂ ತೊರೆದು ನೀನು//

ಕುರುಡು ಕಾಂಚಾಣ ಕುಣಿಸುತ್ತಿದೆ
ಬಂಧು ಬಳಗದಲ್ಲಿ ವಿಷಬೀಜ ಬಿತ್ತಿ/
ಬರಡು ಭೂಮಿಯಲ್ಲಿ ಸಂಬಂಧದ
ಪೈರು ಬೆಳೆಸು ಒಲವು ಎರೆದು ನೀನು//

ನೋವು ನಲಿವುಗಳ ಮರೆಮಾಚಿ
ಅನುದಿನ ಕಾಯಕದಿ ಮಗ್ನನಾಗು/
ನೊಂದ ಜೀವಕ್ಕೆ ಸಾಂತ್ವನ ಹೇಳಿದೆ
ಕುಹುಕ ನುಡಿಯದಿರು ಜರೆದು ನೀನು//

ರವಿಯ ಕಿರಣಕ್ಕೆ ಮಂಜು ಕರಗುವಂತೆ
ಬಡತನ ದೂರವಾಗುವುದು ಚಿಂತಿಸದಿರು/
ಕವಿಯ ಹೃದಯ ಮಧುರ ಭಾವದಿಂದ
ಮೀಟಿದೆ ಕಾವ್ಯ ಬರೆದು ನೀನು//

✍️ ಕವಿತಾ ಹಿರೇಮಠ

ಕವಿತಾ ಹಿರೇಮಠ

ಕವಿತಾ ಹಿರೇಮಠ ಅವರು ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಚಿಂಚರಕಿ ಎಂಬ ಗ್ರಾಮದಲ್ಲಿ. ಬಾಲ್ಯದಿಂದಲೂ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡಿದ್ದ ಇವರು, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸ್ವಂತ ಫೋಟೋ ಸ್ಟುಡಿಯೋದಲ್ಲಿ ಛಾಯಾಗ್ರಾಹಕಿಯಾಗಿದ್ನದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಗಝಲ್ ಗಳನ್ನು ಬರೆದಿದ್ದಾರೆ. ಕೃತಿ: ಹೃದಯವೀಣೆ

More About Author