
ಗಟ್ಟಿಗಿತ್ತಿ ನನ್ನವ್ವ ಗಟ್ಟಿಗಿತ್ತಿ
ಹೊಟ್ಟೆ ಬಟ್ಟೆ ಕಟ್ಟಿ ಸಾಕಿದೆ ನಾ ಮರೆತಿಲ್ಲ
ಗಟ್ಟಿಗಿತ್ತಿ ನನ್ನವ್ವ ಗಟ್ಟಿಗಿತ್ತಿ
ಜೀವನ ಅರಿವ ಮುನ್ನ ಸಂಸಾರ ಶುರುವಾಗಿ
ಬಡತನದ ಬೇಗೆಯಲಿ ಬೆಳೆಯುದು ಮರವಾಗಿ
ಜೀವನ ಅರಿವ ಮುನ್ನ ಸಂಸಾರ ಶುರುವಾಗಿ
ಬಡತನದ ಬೇಗೆಯಲಿ ಬೆಳೆಯುದು ಮರವಾಗಿ
ಗಟ್ಟಿಗಿತ್ತಿ ನನ್ನವ್ವ ಗಟ್ಟಿಗಿತ್ತಿ
ನಿನ್ನೊಡಲ ಬೆಂಕಿಯೂ ಹತ್ತಿ ಉರಿಯುವುದು ಬರವಾಗಿ
ನಿಂದಿಸಲಾರು ಬರರು ನಿನ್ನಯ ಪರವಾಗಿ
ನಿನ್ನೊಡಲ ಬೆಂಕಿಯೂ ಹತ್ತಿ ಉರಿಯುವುದು ಬರವಾಗಿ
ನಿಂದಿಸಲಾರು ಬರರು ನಿನ್ನಯ ಪರವಾಗಿ
ಅದನರಿತು ಬಾಳು ನಿನ್ನಯ ಸಲುವಾಗಿ
ಅದನರಿತು ಬಾಳು ನಿನ್ನಯ ಸಲುವಾಗಿ ಗಟ್ಟಿಗಿತ್ತಿ ನನ್ನವ್ವ ಗಟ್ಟಿಗಿತ್ತಿ
ಗಂಡಂನೆಂದರೆ ದೈವ ಎಂದುಕೊಂಡವಳಾಕೆ
ನಿಂದನೆಯ ಸರಮಾಲೆ ತಂದು ಕೊಂಡವಳಾಕೆ
ಗಂಡಂನೆಂದರೆ ದೈವ ಎಂದುಕೊಂಡವಳಾಕೆ
ನಿಂದನೆಯ ಸರಮಾಲೆ ತಂದು ಕೊಂಡವಳಾಕೆ ಗಟ್ಟಿಗಿತ್ತಿ ನನ್ನವ್ವ ಗಟ್ಟಿಗಿತ್ತಿ
ವರ್ಷಪೂರ್ತಿ ದುಡಿದರು ನೀ ಹೊಸ ಬಟ್ಟೆ ತೊಡಲಿಲ್ಲ
ಸಂಸಾರಕ್ಕಾಗಿ ದುಡಿವುದು ನೀ ಮರೆತಿಲ್ಲ
ವರ್ಷಪೂರ್ತಿ ದುಡಿದರು ನೀ ಹೊಸ ಬಟ್ಟೆ ತೊಡಲಿಲ್ಲ
ಸಂಸಾರಕ್ಕಾಗಿ ದುಡಿವುದು ನೀ ಮರೆತಿಲ್ಲ ಗಟ್ಟಿಗಿತ್ತಿ ನನ್ನವ್ವ ಗಟ್ಟಿಗಿತ್ತಿ
ಬಂದು ಹೋಗುವವರೆಲ್ಲ ಬಂದು ಬಾಂದವರು
ಕಷ್ಟ ಸುಖದಲ್ಲಿ ನಿಲ್ಲುವವರಾರು
ಬಂದು ಹೋಗುವವರೆಲ್ಲ ಬಂದು ಬಾಂದವರು
ಕಷ್ಟ ಸುಖದಲ್ಲಿ ನಿಲ್ಲುವವರಾರು
ನಿನ್ನ ಮನವ ನೀ ಅರಿತರೆ ಸಾಕು ಲೋಕದ ಚಿಂತೆ ನಿನಗೇಕೆ ಬೇಕು
ನಿನ್ನ ಮನವ ನೀ ಅರಿತರೆ ಸಾಕು ಲೋಕದ ಚಿಂತೆ ನಿನಗೇಕೆ ಬೇಕು
ಗಟ್ಟಿಗಿತ್ತಿ ನನ್ನವ್ವ ಗಟ್ಟಿಗಿತ್ತಿ
- ಸುಪ್ರಿಯಾ ಹಿರೇಮಠ
ಸುಪ್ರಿಯಾ ಹಿರೇಮಠ
ಸುಪ್ರಿಯಾ ಹಿರೇಮಠ ಅವರು ಮೂಲತಃ ಬೆಳಗಾವಿಯ ಜಿಲ್ಲೆಯ ಮೂಡಲಗಿ ತಾಲ್ಲೂಕು ಢವಳೇಶ್ವರದವರು. ಬಿ.ಎಡ್ ಹಾಗೂ ಎಂ.ಎ ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ.
More About Author