Poem

ಜೀವನ ಸಾಗುತಲಿಹುದು

ಸಾಗುತಲಿಹುದು ಪದದಲಿ
ಮೂರಕ್ಷರದ ದೆಸೆಯಲಿ
ಪ್ರಾರಂಭವು ಜನನದಲಿ
ದಿನ ಕಳೆದ ನಂತರದಲಿ
ಸ್ಥಿತಿಯಲಿ ಮುದ್ದು ಮನಸು.

ಕಿನ್ನರಿ ಜೋಗಿಯ ಚಿಣ್ಣರು
ಮುಂದೇನು ಬಾಲಿಕ ಅವಸ್ಥೆಯು
ಅನಂತರ ಯೌವ್ವನವು
ಕದಡಲಾರದ ನೌಕರಿಯು
ತೀರಲಾರದ ಸುಂದರ ಕನಸುಗಳು.

ಭಾವಗಳ ಹೂದೋಟವು
ಸುಖ ದುಃಖದ ದೀವಿಗೆಯು
ವಿಧಿಯಂತೆ ಮದುವೆಯು
ಏರಿದಂತೆ ಮುಂದಿನ ಪಯಣವು.

ಈ ದಾರಿಯಲಿ ಮಕ್ಕಳು
ಹೀಗೆಯೇ ಸುದೀರ್ಘವು
ನಂತರ ಮಕ್ಕಳ ಶಿಕ್ಷಣವು
ತೊಂದರೆ ತಾಪತ್ರಯಗಳ
ಬಂಧನದ ಸುರುಳಿಯು.

ಮುಂದಿನ ಆಯುಷ್ಯವು
ಮುಗಿಯದ ಭವಿಷ್ಯವು
ಕೊನೆಯ ಪಯಣವು
ಮೂರಕ್ಷರ ಮರಣವು.

-ಸಿಂಚನ ಜೈನ್
ಮುಟ್ಟದ ಬಸದಿ.

ಸಿಂಚನ ಚಂದ್ರಕಾತ್ ಜೈನ್

ಸಿಂಚನ ಚಂದ್ರಕಾತ್ ಜೈನ್ ಮೂಲತಃ ಹೊನ್ನಾವರದವರು. ಬರವಣಿಗೆ ಹಾಗೂ ಕವನ ರಚನೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author