Poem

ಕಳೆದುಹೋದವರ ಕಥೆ

ಮೋಸಗಳ ಅರಿತ‌ ಮೇಲು
ಗತಕಾಲದ ರಾಗಗಳ ಮೇರೆಗೆ
ಶಕುನಿಗೆ ಸಹಾಯ ಮಾಡಿದಾಗ
ಆ ಕರ್ಣ ಕಳೆದುಹೊದ

ಹಲವು ವಿಫಲದ ನಂತರ
ಬಲು ಛಲದಲಿ ಹಪಹಪಿಸಿದರೂ ಕೂಡ
ಮತ್ತದೆ ಫಲಿತಾಂಶ ನೋಡಿದಾಗ
ಆ ಸೀತೆ ಕಳೆದುಹೊದಳು

ಯಾಂತ್ರಿಕ ಯುಗದಲಿ
ಕಲರವವೂ ಕಿರುಚಾಟವಾಗಿ ಕೇಳಿ
ಮುಗ್ಧ ಕೃಷ್ಣನೂ ಕಳೆದುಹೊದ
ಹಣದ ದಾರಿಯಲಿ ಬುದ್ದಿಹೀನನ ಕಂಡು
ಯುಧಿಷ್ಠಿರನು ಕಳೆದುಹೊದ

ಕಳೆದುಹೋದವರು ಮತ್ತು ಕಳೆದುಕೊಂಡವರ ಮಧ್ಯೆ
ನನ್ನ ಮನದಲಿ ತಪ್ಪಿತಸ್ಥಗೆ ಶಿಕ್ಷೆ

- ಅನೀಶ್ ಪ್ರಸಾದ ಪಾಂಡೇಲು

ಅನೀಶ್ ಪ್ರಸಾದ ಪಾಂಡೇಲು

ಕವಿ ಅನೀಶ್ ಪ್ರಸಾದ ಪಾಂಡೇಲು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಗ್ರಾಮದವರು. ಬಿಎಸ್ಇ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author