Poem

ಕಾವಲಿಗಿದ್ದ ಕಣ್ಣು

ನಿನ್ನ ನೆನಪುಗಳು ದಿನವೂ ಕಾಡುತ್ತಿವೆ ಗೆಳತಿ
ಒಳಗಿನ ಬಯಕೆ ನಿತ್ಯವೂ ಅರಳುತ್ತಿವೆ ಗೆಳತಿ

ಕಾವಲಿಗಿದ್ದ ಕಣ್ಣುಗಳು ನೋಡುತ್ತಿವೆ
ಬಿಟ್ಟು ಬಿಡದೆ
ಹೃದಯ ಭಾರವಾಗಿ ಭಾವನೆಗಳು ಕಮರುತ್ತಿವೆ ಗೆಳತಿ

ಜೀವ ಜಲ್ಲೆಂದು ಹಠ ಮಾಡುತ್ತ ಕುಳಿತಿವೆ
ಹೇಳದೆ ದೂರ ಹೋದವಳ ದಾರಿ ಕಾಯುತ್ತಿವೆ ಗೆಳತಿ

ಕಲ್ಲಾದ ಮನಸಿಗೆ ಹೊಣೆ ಇಲ್ಲವೆಂದು
ತಿಳಿಯ ಬೇಕು
ಮೌನ ಉತ್ತರವಾಗಿ ಮಾತು ಮತಿಸಿ
ಹೋಗುತ್ತಿವೆ ಗೆಳತಿ

ಒಳಗೆ ಅಡಗಿದ ಉತ್ತರಕ್ಕೆ ನಾನು ನೀನು ಸಾಕ್ಷಿಯಾಗಬೇಕು
ಮರುಳನ ಮನದ ತುಂಬಾ ಬಯಕೆ ಕುಣಿಯುತ್ತಿವೆ ಗೆಳತಿ

- ಮರುಳಸಿದ್ದಪ್ಪ ದೊಡ್ಡಮನಿ

ಮರುಳಸಿದ್ದಪ್ಪ ದೊಡ್ಡಮನಿ

ಕವಿ ಮರುಳಸಿದ್ದಪ್ಪ ದೊಡ್ಡಮನಿಯವರು ಹುಟ್ಟಿದ್ದು ದಿನಾಂಕ 1976ರ ಜನವರಿ 1 ರಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಗಾವರಾಳದಲ್ಲಿ. 

ಗದಗ ಜಿಲ್ಲೆಯ ಹುಲಕೋಟೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಪದವಿ- ಪೂರ್ವ, ಶಿಕ್ಷಣವನ್ನು ಮುಗಿಸಿದರು.  ತಾಂತ್ರಿಕ ಶಿಕ್ಷಣ, ಮತ್ತು ಸಿ.ವಾಯ್ ಎಸ್ ಕೋರ್ಸ್ ನ್ನು ಪೂರೈಸಿಕೊಂಡು ನಂತರ ಗದಗ ಶಾಖೆಯಲ್ಲಿ ವಿಮಾ ಸಲಹೆಗಾರನಾಗಿ ಬದುಕು ರೂಪಿಸಿಕೊಳ್ಳುತ್ತಾ, ಕವನ, ಲೇಖನ, ಕಥೆಗಳನ್ನು ಬರೆಯುವ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದರು. 

ನಾಡಿನ ಹಲವಾರು ಪ್ರಸಿದ್ದ ಪತ್ರಿಕೆಗಳಲ್ಲಿ ಇವರ ಕವಿತೆ, ಲೇಖನ, ಕಥೆಗಳು ಪ್ರಕಟಗೊಂಡಿವೆ. 2010ರಲ್ಲಿ ’ಮುತ್ತಿನ ಹನಿ’ (ಹನಿಗವನ ಸಂಕಲನ) ಕೃತಿ, 2014ರಲ್ಲಿ ’ನೆಲದ ಹನಿ’ ಕಥಾ ಸಂಕಲನ ಪ್ರಕಟವಾಗಿದೆ. 

More About Author