Poem

ಮುಂಜಾನೆ ನೆನಪು

ಪ್ರೇಮಕಾವ್ಯ ಅರಳಲು
ಭಾವ ಬೆಸೆದು ಹೊಸೆದಿದೆ
ಮನವು ಹಕ್ಕಿಯಾಗುತಿರಲು
ರೆಕ್ಕೆ ಬಿಚ್ಚಿ ಕುಣಿದಿದೆ

ಮೋಡ ಬಾನ ತಬ್ಬಲು
ಇಳೆಗೆ ಮಳೆಯ ಹಬ್ಬವು
ದಾಹ ತಣಿದ ಧರೆಯ ಒಳಗೆ
ಬೀಜ ಮೊಳಕೆ ಬಸಿರವು

ಸಣ್ಣ ಹನಿ ಬೆವರಿನ ಮಿನುಗು
ಬಾನೆತ್ತರದಲಿ ಗಿಡಮರಗಳ ಹೊನಲು
ಭೂತಾಯಿಯ ಸೊಬಗಿನ ಮಡಿಲಲಿ
ಮಣ್ಣಿನ ಮಗನ ದುಡಿಮೆಯ ಫಲವು

ತಾಯಿ ಗರ್ಭದಿಂದ ಇಣುಕುವ ರವಿಯ ನೋಡ
ಚಿಲಿಪಿಲಿಸುವ ಹಕ್ಕಿಗಳ ಅಂದದ ಗೂಡ
ಕೈ ತುತ್ತು ಕೊಟ್ಟವಳು ಎದೆಯುದ್ದ ಬೆಳೆಸಿದವಳು
ನೀ ಕೇಳ ಅವಳ ಮುಂಜಾನೆಯ ಹಾಡ!

ಮೇಘಾ ಎಸ್‌ ಎಚ್‌

ಕವಿ ಮೇಘಾ ಎಸ್‌ ಎಚ್‌ ಅವರು ಕೊಂಚೂರಿನ ಏಕಲವ್ಯ ಮಾದರಿ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದಾರೆ. ಕವಿತೆ, ಓದು ಇವರ ಹವ್ಯಾಸ.

More About Author