Poem

ನಿನ್ನ ನೆನಪು

ನಿನ್ನ ನೆನಪು
ಕಾಡಿತು ಎನ್ನ ಮನವು
ಹೃದಯ ಎಂದಿತು
ಬೇಡ ಅವಳ ನೆನಪು

ನೆನಪಾದರೆ ಸಾಕು
ಹೃದಯದ ನೋವು
ಕಣ್ಣೀರ ಧಾರೆಯಾಗಿ
ಹರಿಯುವುದು..

ಹೃದಯಕ್ಕೆ ನೋವಾದರೆ
ಧಾರಾಕಾರವಾಗಿ ಉಕ್ಕಿ
ಬರುವುದು ಕಂಬನಿ
ಹೃದಯ ಕಣ್ಣಿನ ನಡುವೆ
ಕಂಬನಿ ಹರಿಯದಾಗೆ
ಕಟ್ಟಲಾದಿತ್ತೇ ಅಣೆಕಟ್ಟು

ಅವಳ ನೋಡಿ ಕಣ್ಣು
ಇಷ್ಟಪಟ್ಟಿದ್ದರ
ಕರ್ಮದ ಫಲಕ್ಕೆ
ಸುರಿಸುತ್ತಿವುದು ಕಂಬನಿ

ಹೃದಯ ಪ್ರೀತಿಸಿದ್ದಕ್ಕೆ
ಸಿಕ್ಕ ಪ್ರತಿಫಲ ಬರೀ ನೋವು
ಕಾರಣ ಹೇಳದೇ ದೂರವಾಗಿದ್ದಕ್ಕೆ
ನೋವಿನಿಂದ ತತ್ತರಿಸಿದೆ ಮನವು.
✍️ ರಾಜೇಸಾಬ ಕೆ. ರಾಟಿ

ರಾಜೇಸಾಬ ಕೆ. ರಾಟಿ

ಕವಿ ರಾಜೇಸಾಬ ಕೆ.ರಾಟಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆದವಟ್ಟಿಯವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆದವಟ್ಟಿ ಸರಕಾರಿ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶಿರೂರದಲ್ಲಿ ಪೂರೈಸಿದ್ದಾರೆ. ನಂತರ ಕುಕನೂರದಲ್ಲಿ ಪಿಯುಸಿ ಮುಗಿಸಿ ನಂತರ ಕೊಪ್ಪಳ ಜಿಲ್ಲೆಯ ಮಂಗಳೂರದಲ್ಲಿ ಡಿ.ಎಡ್.‌ ಮುಗಿಸಿ ಯಲಬುರಗಾದಲ್ಲಿ ತಮ್ಮ ಬಿ.ಎ ಪದವಿ ಪಡೆದರು. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ.

ಕೃತಿ: ನೆನಪುಗಳ ಮೆರವಣಿಗೆ.

More About Author