Poem

ಸಾಗಬೇಕಿದೆ

ಚಂಚಲತೆಯ ತೊರೆದು
ಬಿಗುಮಾನವ ಒರೆದು
ಅಹಂಕಾರವ ಅರೆದು
ಸಾಗಬೇಕಿದೆ ಛಲದಿಂದ

ಆತ್ಮಸ್ಥೈರ್ಯದಿ ಅಡಿಯಿಟ್ಟು
ಸೃಜನಾತ್ಮಕತೆಯಲ್ಲಿ ಚಿತ್ತವಿಟ್ಟು
ಪ್ರತಿಕಾರ್ಯದಲ್ಲಿ ಲಕ್ಷ್ಯವಿಟ್ಟು
ಸಾಗಬೇಕಿದೆ ಜಾಗರೂಕತೆಯಿಂದ

ಟೀಕೆಗಳ ಕೇಳಿ ಕಿವುಡನಂತೆ
ಅವಮಾನಗಳಿಗೆ ಮೂಕನಂತೆ
ಕೆಡುಕುಗಳಿಗೆ ಗಾಂಪನಂತೆ
ಸಾಗಬೇಕಿದೆ ಸಂಯಮದಿಂದ

ಅಡ್ಡಿ ಆತಂಕಗಳ ದಾಟಿ
ಮೂಢ ಆಚರಣೆಗಳ ಮೆಟ್ಟಿ
ವ್ಯಯ ವಿಕೋಪಗಳ ಅಟ್ಟಿ
ಸಾಗಬೇಕಿದೆ ಕೆಚ್ಚೆದೆಯಿಂದ

ಸಕಾರಾತ್ಮಕ ಭಾವದೊಂದಿಗೆ
ಪ್ರಾಮಾಣಿಕ ಪ್ರಯತ್ನದೊಳಗೆ
ನಾಳೆಯ ನಂಬಿಕೆ ಜೊತೆಗೆ
ಸಾಗಬೇಕಿದೆ ನಿಷ್ಠೆಯಿಂದ

ನೆನ್ನೆ ನಾಳೆಗಳ ಚಿಂತೆಯಿಲ್ಲದೆ
ಏರು ಪೇರುಗಳ ಬಂಧವಿರದೆ
ಸೋಲು ಗೆಲುವುಗಳ ಭೀತಿಯಿರದೆ
ಸಾಗಬೇಕಿದೆ ಮುಗುಳ್ನಗೆಯೊಂದಿಗೆ.

-ಪೂಜಾ ಎಂ ಪಿ

ಪೂಜಾ ಎಂ. ಪಿ

ಲೇಖಕಿ ಪೂಜಾ ಎಂ. ಪಿ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮೇಳಾಪುರ ಗ್ರಾಮದವರು. ಪ್ರಸ್ತುತ ಮೈಸೂರಿನಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿ. ಪ್ರೌಢಶಾಲೆಯಲ್ಲಿ ವಿಜ್ಞಾನ, ನಾಟಕ ರಂಗದಲ್ಲಿ ಹಲವು ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಚರ್ಚೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ವಾಗ್ಮೀಯೂ ಹೌದು. ಪ್ರತಿಭಾ ಸ್ಪಂದನ ತಂಡದಿಂದ facebook ಲೈವ್ ಕಾರ್ಯಕ್ರಮದಲ್ಲಿ RJ ಕೆಲಸ ಮಾಡಿದ್ದ ಅವರು, ಕವನಗಳನ್ನು ರಚಿಸಿದ್ದಾರೆ. ಕಲರ್‍ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ಶೋ ನಲ್ಲೂ ಭಾಗಿಯಾಗಿದ್ದು, ವಿವಿಧ ಕಾಲೇಜುಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. 

More About Author