Poem

ಎಂದಿಗೂ ತಿಳಿಯದಿರಲಿ. 

ಮಬ್ಬುಗತ್ತಲಿನ ಒಳ ಕೋಣೆಯಲ್ಲ
ದೀಪದ ಬೆಳದಿಂಗಳು ಚೆಲ್ಲಿದೆ
ಕೊಂಚವೇ ಕಿರು ಬೆರಳು‌ ತಾಗಿ
ಜಾರಿ ಬಿದ್ದ ಬಣ್ಣದ ಡಬ್ಬಿಗಳಿವೆ.

ಅಂಬೆಗಾಲಿನ ಹುಡಗನೆದೆಗೆ
ಹತ್ತಾರು ಬಣ್ಣವೇ ಮೆತ್ತಿದೆ
ಸಪೂರ ಕೈಗಳಲ್ಲೀಗ ಹಠಾತನೇ
ಬಣ್ಣಗಳ ಯುದ್ದ ಜರುಗಿದೆ.‌

ಹಸಿರು, ಕೆಂಪು, ನೀಲಿ ಕೆಸರಿಗಳೆಲ್ಲ
ಹುಡಗನ ಕೆನ್ನೆ ಕೈಕಾಲಿಗಂಟಿದೆ
ಎನೂ ಅರಿಯದ ಪುಟ್ಟ ಕೈಗಳೀಗ
ಬಣ್ಣದಾಟ ಆಡುತ್ತಲೇ ಇವೆ.

ಅದರ ಬಣ್ಣದ ಮುಖದಲ್ಲೊಂದು
ಎಂದೂ ಮಾಸದ ನಗುವಿದೆ.‌
ಎಂದೆಂದಿಗೂ ತಿಳಿಯದಿರಲಿ
ಬಣ್ಣಕ್ಕೊಂದು ಧರ್ಮಗಳಿವೆ ಎಂದು.‌

- ರವಿ ಶಿವರಾಯಗೊಳ

ರವಿ ಶಿವರಾಯಗೊಳ

ರವಿ ಶಿವರಾಯಗೊಳ ಅವರು ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಭೀವರ್ಗಿ ಎಂಬ ಪುಟ್ಟ ಹಳ್ಳಿಯವರು. ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರುವ ಅವರು ಸದ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರ ಅವರ ಆಸಕ್ತಿಯಾಗಿದೆ. ದಿನಪತ್ರಿಕೆಗಳಾದ ವಿಶ್ವವಾಣಿ, ಕರ್ಮವೀರ, ಉದಯವಾಣಿ, ಓ ಮನಸೇ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕವಿತೆ, ಕವನ, ಕಥೆ, ಲೇಖನ ಪ್ರಕಟಗೊಂಡಿರುತ್ತದೆ.

More About Author