Story/Poem

ಬೇಲೂರು ರಘುನಂದನ್

ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 2009ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಇವರನ್ನು ನೇಮಕ ಮಾಡಿದೆ. ಮೊದಲು ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ, ಸದ್ಯ ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2017ರಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ನಾಟಕ ಅಕಾಡೆಮಿಗೆ ಇವರನ್ನು ಸದಸ್ಯನನ್ನಾಗಿ ನೇಮಕ ಮಾಡಿತು. ಸಾಹಿತ್ಯ, ರಂಗಭೂಮಿ, ಸಿನೆಮಾ, ಸಂಗೀತ ಹಾಗೂ ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿಯುಳ್ಳ ಇವರು ಕಾಜಾಣದ ಸಂಸ್ಥೆಯ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಾಡುತ್ತಾ ಬಂದಿದ್ದಾರೆ. ಇವರ ಸಾಹಿತ್ಯ ಕೃತಿಗಳು ಇಂಗ್ಲಿಷ್, ಹಿಂದಿ, ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. 2019ನೇ ಸಾಲಿನ ಬೇಲೂರು ತಾಲೂಕು ಕನ್ನಡ  ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವರಿಗೆ ಲಭಿಸಿದೆ.

More About Author

Story/Poem

ಭೂಮಿಯ ಬೆನ್ನು  

ಅಕ್ಕಿ ನೀರನ್ನು ಬಳಸಿಕೊಳ್ಳುವುದು ನೀರೂ ಅಕ್ಕಿಯನ್ನು ಉಳಿಸಿಕೊಳ್ಳುವುದು ರುಚಿಗೆ ಶಕ್ತಿ ಬೆರೆಸಿದ್ದು ನೀರೂ ಹೇಳಲಿಲ್ಲ ಅನ್ನವೂ ಮಾತಾಡಲಿಲ್ಲ ಇದು ವಿಕಾಸದ ಬೆಸೆದ ಹಾದಿ ಎಲ್ಲವೂ ಮುಗಿಯುವುದು ದುರ್ಬಳಕೆಯಿಂದ ಆಯ್ಕೆಯ ಸದ್ಭಳಕೆ ಸೃಷ್ಟಿ ಸತ್ಯ ಒಮ್ಮೆ ಸೃಷ್ಟಿಯಾದ...

Read More...

ಭರವಸೆಯ ಹಾಡು

ಹೊರಗೆ ಗಲಾಟೆ ಗದ್ದಲ ಪತಾಕೆಗಳ ಪಾರುಪತ್ಯ ಬಾವುಟಗಳ ಮಾರಾಟದ ನಡುವೆ ಯಾರ ಮನೆಯೊಳಗೆ ನಗುವೆಂಬ ಹೂವು ಅರಳುತ್ತಿಲ್ಲ ಉಡುಗೊರೆ ತರಲೆಂದು ಅಂಗಡಿಗೆ ಹೋದರೆ ಮಾರಾಟಗಾರರು ತಮ್ಮ ಬಣ್ಣವನ್ನು ಮುಂದಿಡುತ್ತಾರೆ ಹೃದಯದ ಮಾತಿಗೂ ಬೆದರಿಕೆ ಒಡ್ಡುವ ಕಾಲದಲ್ಲಿ ಮತ್ತೆ ಮತ್ತೆ ಹೊರಗೆ ಬಾಜಾ ಭ...

Read More...

 ದರ್ಶನ 

ನಾನು ಕೇಳುತ್ತೇನೆ ನೀವು ಹೇಗಿದ್ದೀರಿ? ನೀವು ಹೇಳುತ್ತೀರಿ ನೀನು ಹಾಗೇ ಇರು ಇರುವುದೆಂದರೇನು? ಪಂಜರದ ಹಕ್ಕಿ ಹಾರಲು ಮರೆತಿದೆ ಗೊಂದಲಕ್ಕೆ ಬಿದ್ದ ರೆಕ್ಕೆಗಳಿಗೆ ಹಾರಿ ಹೋಗೆಂದು ಬೆತ್ತ ತೋರಿಸುತ್ತೀರಿ ಅಲ್ಲೇ ಇದ್ದು ಇದ್ದೂ ಇರುವುದನ್ನೇ ನಂಬಿದ್ದ ಹಕ್ಕಿಗೆ ಇಲ್ಲಿ ಇರದೇ ಎಲ್...

Read More...

ಸಂಕ್ರಮಣದ ಹಾಡೇ ಬಾ 

ಅದು ಮಂಜು ಮುಸುಕಿನ ಮುಂಜಾವು ಪಥ ಬದಲಿಸುವ ರವಿಯ ಮುಂದೆ ಇಬ್ಬರು ಗೆಳೆಯರು ಟೀ ಅಂಗಡಿಯ ಮುಂದೆ ಕುಳಿತು ಒಂದೇ ಸಮನೇ ಬಾಯಿಗೆ ಬಂದ ಹಾಡುಗಳನ್ನು ಹೃದಯ ತುಂಬಿ ಹಾಡುತ್ತಿದ್ದರು ಟೀ ಅಂಗಡಿಯ ಮಾಲೀಕ ಟೀ ಕುದಿಸಿ ಕುದಿಸಿ ಸಾಕಾಗಿ ಹಾಡಿಗೆ ಮನಸೋತು ಮತ್ತೆರಡು ಕಪ್ಪು ಟೀ...

Read More...

ಕಟ್ಟುಪದ

ಆಳವಾದ ಕಡಲಿಗೆ ಆಳವಿಲ್ಲದ ದಡವು ಅತ್ತ ಹೋಗಿ ಇತ್ತ ಬರುವ ಮಾಯಾ ಹಡಗು ದೋಣಿ ಮುಳುಗಲು ಸಣ್ಣ ರಂಧ್ರ ಸಾಕು ದೇಹ ಮುಳುಗದಿರಲು ಸಶಕ್ತ ಪಂಚೇಂದ್ರಿಯಗಳಿರಬೇಕು ಆಳದ ಕಡೆಗೆ ಹೋದ ಯಾನ ದಡದೆಡೆಗೆ ಬರುವುದು ದಡದಲಿ ನಿಂತ ಕಣ್ಣೋಟ ಆಳದ ಕಡೆಗೆ ನೋಡುವುದು ಗೂಟದ ಹಗ್ಗ ಕಸಿದು ಪಾಶದ ಹಗ್ಗ ಸೇರುವ ತ...

Read More...