Story/Poem

ಮಹಾಂತೇಶ ನವಲಕಲ್

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನ ಮಹಾಂತೇಶ ನವಲಕಲ್ ಅವರು ಕೃಷಿ ಪದವೀಧರರು. ’ನೀರಿನ ನೆರಳು’ ಇವರ ಮೊದಲ ಕಥಾಸಂಕಲನ. ’ನಾನು ಚಂದ್ರಗುಪ್ತನೆಂಬ ಮೌರ್ಯ’ ನಾಟಕವು ಹಲವು ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಪುಸ್ತಕವಾಗಿಯೂ ಪ್ರಕಟವಾಗಿ ಮೆಚ್ಚುಗೆ ಗಳಿಸಿದೆ. ಪುಂಚಾವರಂ ಕುರಿತಾದ ನಾಟಕ ವಿವಾದಕ್ಕೆ ಎಡೆ ಮಾಡಿತ್ತು. ಬೆಸಗರಹಳ್ಳಿ ರಾಮಣ್ಣ ಕಥಾಪುರಸ್ಕಾರ, ದೆಹಲಿ ಕರ್ನಾಟಕ ಸಂಘದ ನೃಪತುಂಗ ಪುರಸ್ಕಾರ, ಪಾಪು ಮರಸ್ಕಾರ, ಸಂಕ್ರಮಣ ಕಥಾ ಪುರಸ್ಕಾರ, ಅಮ್ಮ ಪುರಸ್ಕಾರ, ಉರಿಲಿಂಗ ಪೆದ್ದಿ ಪುರಸ್ಕಾರ, ರಾಜ್ಯೋತ್ಸವ ಪುರಸ್ಕಾರ, ಎರಡು ಬಾರಿ ಇವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜಪುರೋಹಿತ ದತ್ತಿನಿಧಿಯ ಚಿನ್ನದ ಪದಕ ಪುರಸ್ಕಾರ ಪಡೆದಿರುವ ಮಹಾಂತೇಶ ಅವರು ಸದ್ಯ ಕಲಬುರಗಿಯಲ್ಲಿ ವಾಸಿಸುತ್ತಿದ್ದಾರೆ.

More About Author

Story/Poem

ವಿಭವಾಂತರ

ಅವನು ಹೀಗೆ ಮಾತನಾಡುತ್ತಾನೆ ಎಂದುಕೊಂಡಿರಲಿಲ್ಲ ಅವಳು.  ಅವನ ಬುಲೆಟ್ ಹಿಂದುಗಡೆ ಕುಳಿತ ಅವಳ ಕಂಗಳು ಹುಡುಕುತ್ತಿದ್ದುದ್ದು, ಔಷಧ ಅಂಗಡಿಯನ್ನು. ಮುಂದೆ ಅನತಿ ದೂರದಲಿ, ಔಷಧ ಅಂಗಡಿಯನ್ನು ಕಂಡು ಕೂಗಿದ. ಅವಳಿಗೆ ಹೀಗೆ ಮಾತಾಡಿದ್ದ. ಅವಳೋ ಕ್ಷಣ ಮಬ್ಬು, ಟ್ಯೂಬ್‌ಲೈಟ್. ಆ ಕ್ಷಣದಲ...

Read More...