Story/Poem

ಪುನೀತ್ ವಾಣಿ

ಪುವಾ ಎಂಬ ಕಾವ್ಯನಾಮದ ಪುನೀತ್ ವಾಣಿ ಮೂಲತಃ ಬೆಂಗಳೂರಿನವರು. ಸಾಹಿತ್ಯ, ರಂಗಭೂಮಿ, ಜಾನಪದ ಕಲೆಗಳು, ಸಿನೆಮಾ ಹಾಗೂ ಸಮಕಾಲೀನ ವಿದ್ಯಾಮಾನಗಳ ಬಗ್ಗೆ ಅತ್ಯಂತ ಆಸಕ್ತಿವುಳ್ಳ ಇವರು ಉತ್ತಮ ಚರ್ಚಾಪಟುವೂ ಕೂಡಾ ಹೌದು. ವೀರಗಾಸೆ ಜಾನಪದ ಕಲಾಪ್ರಕಾರದಲ್ಲಿ ಕಲಾ ಪ್ರದರ್ಶನ ನೀಡುವ ಇವರು ಹಲವು ನಾಟಕಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಕಲೆಗೆ ತೆರೆದುಕೊಂಡಿರುವ ಪುನೀತ್ ಅವರು ಫೀನಿಕ್ಸ್ ಎನ್ನುವ ಕಿರು ಚಿತ್ರವನ್ನು ನಿರ್ದೇಶನ ಮಾಡಿರುತ್ತಾರೆ. ಪುನೀತ್ ಅವರು ತನ್ನ ತಾಯಿಯ ಹೆಸರಾದ ವಾಣಿ ಯನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡು ಅಭಿವ್ಯಕ್ತಿ ಮಾಡುತ್ತಾರೆ. ಹಾಗೂ ಕಾಲೇಜು ರಂಗಭೂಮಿಯಲ್ಲಿ ಮೂರು ವರ್ಷಗಳ ಕಾಲ ಸಕ್ರಿಯವಾಗಿ ಸರ್ಟಿಫಿಕೇಟ್ ಕೋರ್ಸ್ ಹಾಗೂ ಡಿಪ್ಲೋಮಾ ಕೋರ್ಸ್ ಅನ್ನು ರಂಗಚಿರಂತನದಿಂದ ಪೂರೈಸಿರುತ್ತಾರೆ. 

More About Author

Story/Poem

ಜೀವಪರರು

ಹುಡಿ ಹಾಕಿ ನೊರೆ ಬರುವ ನೀರಿನಲ್ಲಿ ಮೈಲಿಗೆಯ ಬಟ್ಟೆ ಹರಿವ ಕ್ಷೀರವನ್ನು ತಡೆಯಲಾಗದ ಮಂದಿರದ ಕಟ್ಟೆ ಮರುದಿನ ಸೂರ್ಯಾಸ್ತದ ಮುನ್ನ ನಿಂತ ನೀರಲ್ಲಿ ಆಚಾರ ವಿಚಾರ ಸಂಜೆಗೆ ವಂದನೆ ದಿನ ಕಳೆದರೂ ಮನದ ಕೊಳಕು ಕಳೆಯಲಿಲ್ಲ ಕೊನೆಗೆ ಕೊಳಕು ತೆಗೆಯಲೂ ನಾವೇ ಬರಬೇಕಾಯಿತಲ್ಲ ನಾವು, ನೋಡಿ ಮಾತ್ರ ...

Read More...

ನೀಲಿ ಟಾರ್ಪಲ್

ಮಳೆಗಾಲದಲ್ಲಿ ಕಾಯುವ ಚಳಿಯಿಂದ ರಕ್ಷಿಸುವ ಬಿಸಿಲ ಧಗೆಯಿಂದ ಕಾಪಾಡುವ ಕೊನೆಗೆ ನಮ್ಮ ಉಸಿರು ನಿಂತರೂ ಮೈಗೆ ಸುತ್ತುವುದು ನೀಲಿ ಟಾರ್ಪಲ್ ರಕ್ಷಾಕವಚದಿಂದ ನಮಗೆ ಹೇಳೋರು ಕೇಳೋರು ಇಲ್ಲ ಎಂದು ತಿಳಿಯಬೇಡಿ ಸದಾಕಾಲ ನಮ್ಮ ಜೊತೆ ಸಾಗುವುದು ನೀಲಿ ಟಾರ್ಪಲ್ ನಾವು ಕಪ್ಪು ಜನರಲ್ಲ, ನೀಲಿ ಜನರ...

Read More...