Story/Poem

ರವಿ ಶಿವರಾಯಗೊಳ

ರವಿ ಶಿವರಾಯಗೊಳ ಅವರು ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಭೀವರ್ಗಿ ಎಂಬ ಪುಟ್ಟ ಹಳ್ಳಿಯವರು. ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರುವ ಅವರು ಸದ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರ ಅವರ ಆಸಕ್ತಿಯಾಗಿದೆ. ದಿನಪತ್ರಿಕೆಗಳಾದ ವಿಶ್ವವಾಣಿ, ಕರ್ಮವೀರ, ಉದಯವಾಣಿ, ಓ ಮನಸೇ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕವಿತೆ, ಕವನ, ಕಥೆ, ಲೇಖನ ಪ್ರಕಟಗೊಂಡಿರುತ್ತದೆ.

More About Author

Story/Poem

ಖುಷಿಯೊಂದು ಕಳೆದಿದೆ

ಎಲ್ಲಿಯೋ ಕಳೆದಿದೆ ನಮ್ಮಯ ಖುಷಿ ಇನ್ನೆಷ್ಟು ಸಮಯ ಮಂಜೂರಾತಿಗೆ? ಇಲ್ಲಿಯೇ ಕಾದಿದೆ ನಮ್ಮೊಳಗೆ ನೋವು ಮರುಕಳಿಸಿ ಮತ್ತೊಂದು ಹಾಜರಾತಿಗೆ. ಬದುಕೇ ಮುಲಾಮಿಗೆ ಮಾಯದ ಗಾಯ ಮಾರು ಹೋಗಬೇಕೇ ಜಾಹಿರಾತಿಗೆ? ಸಂತೆಯಲೂ ಸಿಗಬಹುದೇ ನೆಮ್ಮದಿಯೂ ಯಾರಿಗೂ ಖಾತರಿ ಇಲ್ಲ ಮಾಹಿತಿಗೆ. ಈ ಖಾಸಗಿ ಸಂ...

Read More...

ಎಂದಿಗೂ ತಿಳಿಯದಿರಲಿ. 

ಮಬ್ಬುಗತ್ತಲಿನ ಒಳ ಕೋಣೆಯಲ್ಲ ದೀಪದ ಬೆಳದಿಂಗಳು ಚೆಲ್ಲಿದೆ ಕೊಂಚವೇ ಕಿರು ಬೆರಳು‌ ತಾಗಿ ಜಾರಿ ಬಿದ್ದ ಬಣ್ಣದ ಡಬ್ಬಿಗಳಿವೆ. ಅಂಬೆಗಾಲಿನ ಹುಡಗನೆದೆಗೆ ಹತ್ತಾರು ಬಣ್ಣವೇ ಮೆತ್ತಿದೆ ಸಪೂರ ಕೈಗಳಲ್ಲೀಗ ಹಠಾತನೇ ಬಣ್ಣಗಳ ಯುದ್ದ ಜರುಗಿದೆ.‌ ಹಸಿರು, ಕೆಂಪು, ನೀಲಿ ಕೆಸ...

Read More...

ಮಗಳೇ...!

ಇಲ್ಲೊಂದು ಬೀದಿಯಲಿ ಕಾಣೆಯಾಗಿದೆ ಮಗು ರಾತ್ರಿ ಗೊತ್ತಿಲ್ಲ ದಾರಿ; ಮರಳಿಲ್ಲ ಕೂಸು. ಅಲ್ಲೊಂದು ಬೀದಿಯಲಿ ಹೊರಟಿತ್ತು ಶವ ಯಾತ್ರೆ ಮುದ್ದಾದ ಕೂಸು; ಮಾಗಿಲ್ಲ ಮನಸು.‌ ಮನೆಗೊಬ್ಬಳೆ ಮಗಳು‌ ಹೆಗಲಾಗಿ ಬೆಳೆದಾಳ ಹೆತ್ತವರ ಪ್ರೀತಿಯಲಿ ಮಗುವಾಗಿ. ಬೆಳದಿಂಗಳ ರಾತ್ರಿಯಲಿ ಚೆಂದಿ...

Read More...

ಅಮ್ಮಾ...

ಅಮ್ಮಾ ನಿನ್ನ ಮಡಿಲಲ್ಲಿ ಮಲಗಬೇಕಮ್ಮ ಒಮ್ಮೆ. ಪ್ರೀತಿಸುವೆ ನಿನ್ನನು ಮಲಗಿಸು ನನ್ನನು ನಿನ್ನೆಯಾ ಧನಿಯಲ್ಲಿ ಲಾಲಿಯ ಹಾಡಮ್ಮ|| ನೀನಿದ್ದರೆ ಬೆಳಕಮ್ಮ ನನ್ನೊಲವ ಜೀವಮ್ಮ ಕರುಣೆಯ ಕಡಲೇ ನೀನು ನೀನೊಂದು ಬೆರಗಮ್ಮ|| ದೇವತೆಯೂ ನೀನಾದೆ ಬೆರಳಿಡಿದು ನಾ ನಡೆದೆ ಇನ್ನೂನೂ ನಡೆಸು ...

Read More...

ಮನದ ತುಡಿತ 

ಬಳಲಿದೆ ಮನವು ಕದಲಿತು‌ ನಗುವು ಬರುವುದೇ ನಲಿವು ಮರಳಿ? ಕಳೆದಿದೆ ಸುಖವು ದುಃಖದ ಗೂಡಲಿ ಸಿಗುವುದೇ ನೆಮ್ಮದಿ ಹೊರಳಿ? ಯಾರ ಹೊಂಚಿಗೆ ಯಾವ ಸಂಚಿಗೆ ನಲುಗಿದೆ ಹೃದಯ ತಿರುಗಿ? ಗಾಳಿಯು ಏಕೆ ನುಸುಳಿತೋ ಒಳಗೆ ನಡುಗಿದೆ ಹಣತೆ ಮರುಗಿ ? ದೂರದ ಹಾದಿ ಕಾಣದೆ ಹೋದರೂ ನಡೆಯುತಲಿಹುದ...

Read More...