Story/Poem

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

More About Author

Story/Poem

ನಿನ್ನೊಳವಿತಿಹೆನ್ನಾತ್ಮವನೆತ್ತೆಂದು!

ರವಿಯಂತರಂಗದಲಿ ಕಿರಣವಡಗಿಹುದೋ, ಸಹಸ್ರಕಿರಣಗಳೊಂದಾಗಿ ರವಿಯರೂಪಿಸಿಹವೋ? ಇರುಳಚಂದಿರನಶೋಭೆಗೆ ತಾರೆಗಳೋ? ತಾರೆಗಳೊಡನಾಟಕೆ ಚಂದಿರನ ಶೋಭೆಯೋ? ಪರ್ವತಾರೋಹಣಕೆ ಸಾಗರಸನ್ನದ್ಧವೋ? ಸಾಗರನೊಡಲಸೇರಲು ನದಿಗಳೋಟವೋ? ಒಂದರೊಳೊಂದಾಗಿಹ ಎರೆಡಂಕಿಗಳು, ಎರೆಡರೊಳೊಂದಾಗಿಮನೆಮಾಡಿಯೊಂದೇಯೆನಲು, ಅ...

Read More...

ಏನೆಂದು ಹೇಳಲಿ

ನಮ್ಮಾತ್ಮಸಾಕ್ಷಿಗಳಲಿ ಲೀನವಾಗಿಹ ಅವಳ ಮೊರೆಯನು. ಏನೆಂದು ಹೇಳಲಿ ನಾ? ನಿರಂತರವಾಗಿ ಹರಿವ ಕಾಲದ ನದಿಯಲಿ, ಕೈಗೂಡಿದ ಕರ್ಮಗಳ ಸಾಲಿನಲಿ, ಜನಿಪ ವಿಸ್ಮಯವಿದೆಂದು ಪರಿಚಯಿಸಲೇ? ಸನ್ನಿವೇಶಗಳ ಸಂಧಿಯಲಿ ಸಿಲುಕಿ, ಅಪರಿಮಿತ ಭಾವ ಸಮ್ಮಿಳನದಲಿ ನಿಲುಕಿ, ನೂರು ವೇಷಗಳಾದರೂ ಮೊಗವೊಂದೇ, ಪರ...

Read More...

ಅಂತರಂಗದಂಬರವೇರಿ

ಪಯಣವೀಬದುಕೆಂದರಿತು ಪಯಣಕೆ ತೆರಳಿ, ದೂರದಾರಿಯದೂರುತ ಸಾಗಿ, ಪಕ್ವಗಾಲದಲಿ ಮಾಗಿ, ಮತ್ತೆ ಬೆಟ್ಟವನೇರಿ, ಅಂತರಾಳದಲಿ ಮನವೂರಿ, ಭುವನಸೌಂದರ್ಯಲಹರಿಯ ಸವಿಯುತ, ಬಾನಬಣ್ಣಿಪವರ್ಣದೋಕುಳಿಯಲಿ ಮಿಂದಮನವು, ನಾಮನಿನ್ನದೇ ಸ್ಮರಿಸಿಹುದು ನೋಡು. ಮುಗಿಲುಜಾರಿದ ಮುತ್ತಿನಹನಿ, ಮಂದಹಾಸವಬೀರಿ ಮ...

Read More...

ಛತ್ರಪತಿ ಶಿವಾಜಿ

ರಾಷ್ಟ್ರವೀರ ಯುಗಾವತಾರಿ, ಛತ್ರಪತಿ ಶಿವಾಜಿಯು! ಪೇಳಿಹುದು ಕಥೆಯೊಂದ ಧ್ವಜವು, ಗತಕಾಲದ್ಯುಗವನು ಮೆಲುಕುತಲಿ, ಶಿಖರಾಗ್ರದಲ್ಲಿ ತನ್ನ ಪೂಜಿಪ, ಧ್ಯೇಯಜೀವಿಯ ನೆನೆವುತಲಿ. ಭರತಭುವಿಯ, ಬಾನರವಿಯ, ಬದಿಗೆ ಸರಿಸಿ ಮೆರೆಯಿತು, ಅಧರ್ಮಕಲಿಯ ಬಾಹುಬಲವು, ಧರ್ಮತೀರವ ನಾಟಿತು. ಮಾಸಗಳು ವ...

Read More...

ರಾಮಕೃಷ್ಣರಲಿ ಶಾರದೆಯಾಗಿ, ಬಂಕಿಮರಲಿ ‘ಭಾರತಿಯಾಗಿ’!...

ರವಿಗಾಣದ ತುದಿಯ ಕವಿಕಂಡ, ಕವಿಗಾಣದ ಪಥದಲಿ ತತ್ಪುರುಷ ನಡೆದ, ತತ್ಪುರುಷಗಾಣದ ನಭೋಪುರದಲಿ, ನಿತ್ಯನಿರ್ವಾಣದಲಿ ಲೀನವಾದವಳಾರು? ಗಂಗೆಯಮುನೆಯರ ಕೂಟದ ಸರಸ್ವತಿಯು, ರಾಮಕೃಷ್ಣರಲಿ ಶಾರದೆಯಾಗಿ, ಸ್ವರಾಜ್ಯ ನಿರ್ಮಾತೃ ಕ್ಷತ್ರೀಯಕುಲಾವಸಂತನ ಭವಾನಿಯು, ಬಂಕಿಮರಲಿ 'ಭಾರತಿಯಾಗಿ'...

Read More...