Story/Poem

ಸುನಂದಾ ಕಡಮೆ

ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು  ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಛಂದ ಪುಸ್ತಕ ಬಹುಮಾನ, ಎಂ.ಕೆ. ಇಂದಿರಾ ಬಹುಮಾನ, ಕಲೇಸಂ ಸುಧಾಮ ದತ್ತಿನಿಧಿಯ 'ತ್ರಿವೇಣಿ' ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ದೊರೆತಿದೆ. 

More About Author

Story/Poem

ಗಾಂಧಿ ಚಿತ್ರದ ನೋಟು

ಆರು ತಿಂಗಳ ಹಿಂದಷ್ಟೇ ತಾರಕ್ಕನ ಸಣ್ಣ ಮಗ ಸುಧೀರನ ಹೆಂಡತಿ ಲೇಖಾ, ಆಸ್ಪತ್ರೆಯಲ್ಲಿ ತುಂಬ ಪ್ರಯಾಸ ಪಟ್ಟು ಹೆರಿಗೆ ನೋವು ತಿನ್ನುತ್ತಿದ್ದಳು. ಆ ಗಾಬರಿಯಲ್ಲಿ ’ಸುರುಳೀತ ಒಂದು ಜೀವ ಎರಡಾದರೆ, ಈ ಸರ್ತಿಯ ಚೌತಿಯಲ್ಲಿ ಗಣಪತಿಗೆ ಹಂಬೆ ಪೂಜೆ ಕಟ್ಟಿಸ್ತೇನೆ’ ಎಂದು ತಾರಕ್ಕ ಹೇಳಿಕೆ ...

Read More...

‌ನಮ್ಮೊಳಗೂ ಒಂದು ಟ್ರಿಗ್ಗರ್ ಇದೆ

ಕತೆಗಾರ್ತಿ ಸುನಂದಾ ಕಡಮೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ತಮ್ಮ ಬರಹಗಳಲ್ಲಿ ನೋಟ ಚೆಲ್ಲುವ ಸುನಂದಾ ಅವರು ಸೀಳುದಾರಿ (ಕವನ ಸಂಕಲನ), ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು (ಕಥಾ ಸಂಕಲನ) ಕೃತಿಗಳನ್ನು ಪ್ರಕಟಿ...

Read More...