Article

ಮಲೆನಾಡಿನ ಕೌತುಕ ಕಾಟಿಹರದ ತಿರುವು

ಮಲೆನಾಡೇ ಒಂದು ಕೌತುಕ ; ಸಿರಿ ,ಸೌಂದರ್ಯಗಳ  ಆಗರ ಅನ್ನುವುದೇನೋ ನಿಜ. ಜೊತೆಗೇ , ಅದರ ಮಡಿಲಲ್ಲಿ  ನೆಲೆ ನಿಂತು ಬದುಕು ಕಟ್ಟುವುದು ಬಹಳ ಕಷ್ಟದ ಕೆಲಸ ಎಂಬುವುದೂ ಅಷ್ಟೇ ನಿಜ.ಗುಡ್ಡ ,ಕಾಡು , ಮಳೆ ,ಮೃಗಗಳ ಜೊತೆಗಿನ ನಿತ್ಯ ಸಂಘರ್ಷದ ಪಯಣ ಅದು. ಅಂಥ ರೂಕ್ಷ ಅನುಭವಗಳಿಗೆ ಸಾಣೆ ಹಿಡಿದು ಕಥನಗಳ ಹೊಳಪು ಕೊಡುವ ನಿಟ್ಟಿನಲ್ಲಿ ಇರುವವರು ,ಗೆಳೆಯ ಕಾರ್ತಿಕ್ ಬೆಳಗೋಡು .

ಕೃಷಿ ಬಡವಾಗುತ್ತಿರುವಂತೆ, ಅನಿವಾರ್ಯವಾಗಿ ಮಲೆನಾಡೂ ಬದಲಾಗುತ್ತಿದೆ.ಅಪರಿಚಿತ ಹೆಜ್ಜೆ ಗುರುತುಗಳು ನಿಚ್ಚಳವಾಗಿ, ಹಿಂದಿನ ಮುಗ್ದತೆ  ಮಾಯವಾಗುತ್ತಿದೆ.ಕಾಳದಂಧೆಗಳು, ರೆಸಾರ್ಟ್ಗಳು ,ನಕ್ಸಲರ ಓಡಾಟಗಳು . ಹೀಗೇ ಇವನ್ನೆಲ್ಲ ಹತ್ತಿರದಿಂದ ಗಮನಿಸುತ್ತಾ ಇರುವ ಕಾರ್ತಿಕ್ , ಹಳ್ಳಿ ಬದುಕಿನ ಕಷ್ಟ ,ಕಾರ್ಪಣ್ಯಗಳ ನಡುವೆ ಅವಡು ಕಚ್ಚಿ ಬದುಕುತ್ತಿದ್ದಾರೆ ;ಬರೆಯುತ್ತಿದ್ದಾರೆ .

ಕಾರ್ತಿಕ್ ಗೆ ವಿಫುಲವಾದ ಅನುಭವ ಸಾಮಗ್ರಿ ಇದೆ; ಕಸುವು ತುಂಬಿದ ಗ್ರಾಮ್ಯ ಭಾಷೆ ಇದೆ ;ಹೇಳಲೇ ಬೇಕು ಎಂಬ ಛಾತಿ ಇದೆ ; ಅದಕ್ಕಿಂತ ಹೆಚ್ಚಾಗಿ  ಕಥೆಯನ್ನು ಆಕರ್ಷಕ ವಾಗಿಸುವ , ಓದುಗರನ್ನು ಸೆರೆಹಿಡಿಯುವ ಶಕ್ತಿ ಇದೆ . ಅದು ಈ ಸಂಕಲನದ ವಿಶೇಷ .ಅನುಭವದ ಹರವಿಗೆ ಅಧ್ಯಯನದ ಆಳ , ಭಾಷೆಯ ಸೊಗಡಿಗೆ ಸೂಕ್ಷ್ಮತೆ, ಸಂವೇದನಾಶೀಲತೆ ತರುವುದು ಇವರ ಮುಂದಿನ ಹೆಜ್ಜೆಗಳಾಗಬೇಕು.

ಪುಸ್ತಕದ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: ಕಾಟಿಹರದ ತಿರುವು

 

ಪ್ರದೀಪ್ ಕೆಂಜಿಗೆ