Article

ಮನದ canvasನಲ್ಲಿ `ಅಶ್ವತ್ಥಾಮನ್‌’ನ ಜೀವನ

ಒಂದೆರಡು ಚಾಪ್ಟರ್ ಓದಿ ಮಲಗೋಣ ಅಂತ ಜೋಗಿಯವರ "ಅಶ್ವತ್ಥಾಮನ್" ಓದಲು ಆರಂಭಿಸಿದ್ದೆ. ಓದುತ್ತಾ ಓದುತ್ತ ವಿಚಾರಗಳ ಸರಣಿಗೆ ನನ್ನ ಮನಸ್ಸು ತೆರೆದುಕೊಂಡಿತು. ಪೂರ್ತಿ ಓದಿ ಮಲಗುವಾಗ ರಾತ್ರಿ 2ಘಂಟೆ !

ಅಶ್ವತ್ಥಾಮನ ನೋವು,ಜೀವನ ದರ್ಶನ, ತಾತ್ವಿಕತೆ,ಅಹಂ ಹಾಗು ಅವನ Overall ವ್ಯಕ್ತಿತ್ವ ! ನಮ್ಮನ್ನು ಇವನಲ್ಲಿ ಕಾಣಬಹುದು ಅಂತ ನಾನು ಹೇಳಲಾರೆ, ಆದರೆ ಅವನ ಜೀವನಾದರ್ಶ , ವಿಚಾರಗಳು - Raw ಆಗಿದ್ದರೂ ಅಳವಡಿಸಿಕೊಳ್ಳತಕ್ಕದ್ದು !

ಕುಡುಕ ತಂದೆಯನ್ನು ತಿದ್ದುವುದಕ್ಕೋಸ್ಕರ ಪೊಲೀಸ್ ಠಾಣೆಯಲ್ಲಿ ತಿರಸ್ಕರಿಸಿದ ರೀತಿ - ತುಂಬಾ ಕಟುವಾಗಿ ಅನ್ನಿಸಿದರೂ , ಅವನ ತಂದೆಯ ಮನದಲ್ಲಿ ಆ ಘಟನೆ ಹಸಿಯಾಗಿಯೇ ಇದ್ದು, ಜೀವಮಾನವಿಡೀ ಸರಿಯಾದ ಮಾರ್ಗದಲ್ಲಿ ನಡಿಯುವುದಂತೂ ನಿಶ್ಚಿತ !

ಸಿನಿಮಾ ಶೂಟಿಂಗ್ ಸಮಯದಲ್ಲಿ ಮನಃ ನಿಗ್ರಹದ ಮೂಲಕ ನಟಿಯ ಸೆಳೆತದಿಂದ ಪಾರಾಗಿದ್ದು, ಕೇರಳದಲ್ಲಿನ ಪ್ರಸಂಗ - ಅಶ್ವತ್ಥಾಮನ ಚಂಚಲತೆಯ ನಿಗ್ರಹದ ಛಲಕ್ಕೆ ಹಿಡಿದ ಕನ್ನಡಿಯಂತಿದೆ.

ಅಲ್ಲೊಂದು ಮಾತಿದೆ ! "ಎಷ್ಟೋ ಸಲ ನಮಗೆ ನಾವೇ ಸೋಲಬೇಕಾಗುತ್ತದೆ. ಹಾಗೆಯೇ ನಮ್ಮನ್ನು ನಾವೇ ಗೆಲ್ಲಬೇಕಾಗುತ್ತದೆ. ಯಾವಾಗ ಅನ್ನುವುದನ್ನು ನಾವೇ ನಿರ್ಧಾರ ಮಾಡಬೇಕು" - ಎಷ್ಟೊಂದು ಅರ್ಥಪೂರ್ಣ.

ಒಂದಂತೂ ನಿಜ, ಓದುತ್ತಾ ಕಳೆದು ಹೋಗಿದ್ದೆ. ಅವನಲ್ಲಿ ನನ್ನ ನೋಡಲಾಗದೆ ಇದ್ದರೂ , ಮನದ canvas ನಲ್ಲಿ ಅಶ್ವತ್ಥಾಮನ ಜೀವನದ ಸುಂದರ ಚಿತ್ರ ಅಚ್ಚಾಗಿತ್ತು. ಲೇಖಕರು ಬರೆದ ಜೀವನ ಚರಿತ್ರೆ ಇಷ್ಟ ಆಗದೆ, ಕೈ ಸೋಲುತ್ತಿದ್ದರೂ, ಬರೆದಿದ್ದನ್ನು ಹರಿದು ಬಿಸಾಕಿ, ಕೇವಲ ಎರಡು ದಿನದಲ್ಲಿ ಎಡಕೈಯಲ್ಲಿ ಬರೆಯುವುದ ಕಲಿತು, ತನ್ನ ಜೀವನ ಚರಿತ್ರೆಯ ತಾನೇ ಬರೆಯಹೊರಡುತ್ತಾನೆ ಅಶ್ವತ್ಥಾಮ. ಅದೆಂತ ಛಲ !

ದ್ವಿತೀಯಾರ್ಧದಲ್ಲಿ ಅವನೇ ಕೇಳಿಕೊಳ್ಳುವ ಪ್ರಶ್ನೆಗಳು, ಅವುಗಳಿಗೆ ಅವನ Perspective ಗಳು ತುಂಬಾ ಹಿಡಿಸಿತು. ಕೊನೆಘಳಿಗೆಯಲ್ಲಿ ಜರುಗುವ ಘಟನೆ , reality ಗೆ ತುಂಬಾ ಹತ್ತಿರ ಇದೆ. ರಂಗದಲ್ಲಿ ಜರುಗುವ ಒಂದು ನಾಟಕದ climax ನಲ್ಲಿ ಇರುವ ನೈಜತೆ ಯಂತೆ ! ನನಗೆ ಅರಿವಿಲ್ಲದೆ ಒಂದು Dramatic Music ಗುನುಗುತ್ತಿತ್ತು. ನನ್ನನ್ನು ಅಷ್ಟೊಂದು involve ಮಾಡಿತ್ತು ಕಥೆಯ Narration !

ಮಹಾಭಾರತದ ಅಶ್ವತ್ಥಾಮನಂತೆ ಇವನೂ ಕೂಡ, ಸಾವಿಲ್ಲದೆ, ನೋವು ತುಂಬಿಕೊಂಡು ಜೀವ ಸವೆಸಬೇಕಾದ ಚಿರಂಜೀವಿ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕ್ ಗೌಡ ಪುಚ್ಚೇರಿ