Article

ನಾಳೀನ ಚಿಂತ್ಯಾಕ....

ಕಲಾವಿದೆ ಶಾಂತಾ ಹುಬಳೀಕರ ಅವರ ಆತ್ಮಚರಿತ್ರೆ 'ನಾಳೀನ ಚಿಂತ್ಯಾಕ' ಅದ್ಭುತ ಕೃತಿ. "ನನ್ನ ಕೈಯಲ್ಲಿ ಕಾಯಿದೆಯ ಅಧಿಕಾರ ಇದ್ದಿದ್ದರೆ, ಮನೆಯಲ್ಲಿಯೇ ದರೋಡೆ ಮಾಡಿ ಪತ್ನಿಯನ್ನು ದರಿದ್ರಳನ್ನಾಗಿ ಮಾಡಿ ರಸ್ತೆಗೆ ಎಳೆದ ಈ ದರೋಡೆಕೋರನಿಗೆ ನಾನು ಆನೆ ಕಾಲಿನ ಬುಡಕ್ಕೆ ಕೆಡವುತ್ತಿದ್ದೆ". ತನ್ನ ಗಂಡನ ಬಗ್ಗೆ ಇಷ್ಟು ನಿಷ್ಠುರವಾಗಿ ಮತ್ತು ಕಟುವಾಗಿ ಹೇಳಿದ ಶಾಂತಾರವರು ಎಷ್ಟು ನೊಂದಿರಬಹುದೆಂದು ಊಹಿಸಬಹುದು.

ಹುಟ್ಟಿನಿಂದ ಹಿಡಿದು ಸಾಯುವ ತನಕ ತಮ್ಮ ಇಡೀ ಬದುಕು ದುರಂತದಿಂದ ತುಂಬಿದ್ದರೂ ಆತ್ಮಹತ್ಯೆ ಮಾಡಿಕೊಳ್ಳದೆ, ಅವರು ಬದುಕನ್ನು ಎದುರಿಸಿದ ರೀತಿ ಮಾದರಿ. ಬದುಕಿದ್ದಾಗ ಮೂರು ಹೊತ್ತಿನ ಊಟ ಹಾಕದ ಮಕ್ಕಳು ಸತ್ತಾಗ ಅಂತ್ಯ ಸಂಸ್ಕಾರ ಮಾಡಿ, ತಮ್ಮ ಜನ್ಮಕ್ಕೆ ಮುಕ್ತಿ ನೀಡಲಿ ಎಂದು ಬಯಸುವ ತಂದೆ ತಾಯಿಯರಿದ್ದಾರೆ. ಆದರೆ ಶಾಂತಾರವರು 'ತನ್ನ ಶವವನ್ನು ತನ್ನ ಮಗ ಮುಟ್ಟಬಾರದೆಂದು, ಆಸ್ಪತ್ರೆಗೆ ದೇಹದಾನ ಮಾಡುವ ಉಯಿಲು ಬರೆದಿಟ್ಟು ತೀರಿಕೊಳ್ಳುತ್ತಾರೆಂದು ಓದಿ, ಅವರ ಬಗ್ಗೆ ಅಭಿಮಾನ ಇನ್ನೂ ಜಾಸ್ತಿಯಾಯ್ತು. ದುರ್ನಡತೆಯ ಮಕ್ಕಳ ಬಗ್ಗೆ ಹೆತ್ತವರು ಇಷ್ಟು ನಿಷ್ಠುರವಾಗ್ಬೇಕೂಂತ ನನಗನ್ನಿಸುತ್ತೆ. ಸಮಯವಿಲ್ಲದಿದ್ರೂ ಸಮಯ ಮಾಡ್ಕೊಂಡು ಓದಿ, ಅದ್ಭುತವಾಗಿದೆ.

ಮಂಗಳ ಸಿ.