Book Watchers

ಅಜಿತ ಹೆಗಡೆ

ಅಜಿತ್ ಹೆಗಡೆ ಅವರು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಪದವಿ ಪಡೆದಿದ್ದಾರೆ. ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಎಂ.ಡಿ. ಪಡೆದಿರುವ ಅವರು ವೈದ್ಯರಾಗಿ ಸೊರಬದಲ್ಲಿ ನೆಲೆಸಿದ್ದಾರೆ. ’ಪರಿಧಾವಿ’ ಎಂಬ ಕಥಾಸಂಕಲನ , ಬಿಳಿಮಲ್ಲಿಗೆಯ ಬಾವುಟ ಮತ್ತು ಸೂರು ಸೆರೆಹಿಡಿಯದ ಹನಿಗಳು ಅವರ ಪ್ರಕಟಿತ ಪುಸ್ತಕಗಳು. ಪ್ರತಿಲಿಪಿ ಸ್ಪರ್ಧೆಯಲ್ಲಿ ಅವರ ’ತಾಯಿ’ ಕಥೆ ಮೊದಲ ಬಹುಮಾನ,. ಹುತ್ತ ಕಥೆ ಹಾಗೂ ನ್ಯಾಸಾಂತರ ಕವನ ತೀರ್ಪುಗಾರರ ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ವಿಗತ ಕವನವು ಸಂಪದ ಸಾಲು ಪತ್ರಿಕೆಯ ಕವನ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದೆ.

Articles

ಉತ್ತಮ ಕಥಾಗುಚ್ಛ ’ದೇವರ ಕುದುರೆ’

ಗಂಗಾಧರಯ್ಯ ಅವರ ಕಥೆಗಳಲ್ಲಿ ಸಾಕುಪ್ರಾಣಿಗಳಿವೆ, ಅನಾಥ ಮಕ್ಕಳಿದ್ದಾರೆ, ಮಕ್ಕಳಾಗದ ದಂಪತಿಗಳಿದ್ದಾರೆ ಅದೆಲ್ಲವುಗಳ ಜೊತೆಗೆ ಅತಿ ಸಾಮಾನ್ಯ ಹಳ್ಳಿಗರಿದ್ದಾರೆ. ಗ್ರಾಮೀಣ ಸೊಗಡಿನ ಭಾಷೆ ಮತ್ತು ವಾತಾವರಣ ಸಂಕಲನದ ಉದ್ದಕ್ಕೂ ಹೇರಳವಾಗಿ ಹರವಿಕೊಂಡಿದೆ.

Read More...

ಭಾವವನ್ನು ಹಿಡಿದಿಡುವ ’ನಿನ್ನ ಪ್ರೀತಿಯ ನೆರಳಿನಲ್ಲಿ’

ಇಪ್ಪತ್ತೇಳು ಕಥೆ, ಲಹರಿ ಮತ್ತು ಬರಹಗಳು ಈ ಕೃತಿಯಲ್ಲಿ ಇವೆ. ಇದಕ್ಕೆ ಕನ್ನಡದ ಖ್ಯಾತ ಕಾದಂಬರಿಗಾರ್ತಿ ಎಸ್.ಮಂಗಳಾ ಸತ್ಯನ್ ಮುನ್ನುಡಿ ಬರೆದು ಹಾರೈಸಿದ್ದಾರೆ. ಇಲ್ಲಿನ ಪ್ರತಿಯೊಂದು ಬರಹಗಳೂ ಪ್ರೀತಿ ಪ್ರೇಮದ ಕುರಿತಾಗಿರುವುದು ವಿಶೇಷ.

Read More...