Book Watchers

ಅಮರೇಶ ಗಿಣಿವಾರ

ಕಥೆಗಾರ- ಕವಿ ಅಮರೇಶ ಗಿಣಿವಾರ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣಿವಾರದವರು. ಅವರ ’ಬಯಲು’ ( 2009) ಎಂಬ ಕವನ ಸಂಕಲನ ಪ್ರಕಟವಾಗಿದೆ. 'ಹಿಂಡೆಕುಳ್ಳು' ಕತೆಗೆ ರಾಜ್ಯ ಮಟ್ಟದ ’ಸಂಗಾತ’ ಯುವ ಕತಾ ಸ್ಪರ್ಧೆಯಲಿ ಬಹುಮಾನ ಲಭಿಸಿದೆ. ಅವರ ಕತೆ ಮತ್ತು ಕವನ ವಿಮರ್ಶೆ, ಪ್ರಬಂಧ, ಲೇಖನಗಳು ರಾಯಚೂರು ಆಕಾಶವಾಣಿ ಹಾಗೂ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ರಾಯಚೂರುವಾಣಿ, ಸುದ್ದಿಮೂಲ, ರಾಯಚೂರ ಸುದ್ದಿಬಿಂಬ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವಧಿ ಇ-ಮ್ಯಾಗಜಿನ್‌ನಲ್ಲಿ ಅವರ ಬರೆಹಗಳು ಬೆಳಕು ಕಂಡಿವೆ.

Articles

ಚೀನಾವನ್ನು ಸುತ್ತಾಡಿಸುವ ‘ಲೂಷನ್ ಅವರ ಆಯ್ದ 10 ಚೀನಿ ಕಥೆಗಳು’

ಎಲ್ಲರಿಗೂ ಹಳೆ ಮನೆಗಳೆಂದರೆ, ಆ ಮನೆಯ ನೋವು-ನಲಿವಿನ, ಎಲ್ಲ ಪ್ರಸಂಗಗಳು ನಮ್ಮನ್ನು ಕೆಣುಕುತ್ತವೆ. ಸಾಮಾನ್ಯವಾಗಿ ಹಳೆ ಮನೆ, ಹಾಳಾದ ಊರು ನೋಡಿದ ತಕ್ಷಣ ನೆನಪಿನ ಕೊಡೆ ಸಡಿಲವಾಗಿಬಿಡುತ್ತದೆ. ಲೂಷನ್ ನ 'ನನ್ನ ಹಳೆಮನೆ' ಕತೆ ಹಳೆಯ ಗೆಳೆಯನಾದ ಯೂನ್-ತು ನೊಂದಿಗೆ ಮುಕ್ತಾಯವಾಗುತ್ತದೆ.

Read More...

ಜೀವಪರ ಕಾಳಜಿಯ ಅನಾವರಣಗೊಳಿಸುವ ’ಬಿಸಿಲ ಬಾಗಿನ’

ರಾಜಕೀಯ ವ್ಯವಸ್ಥೆ, ಕೈಗಾರಿಕೀಕರಣ, ತ್ರಿಕರಣಗಳು ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಗ್ರಾಮೀಣರ ಮುಗ್ಧ ಬದುಕಿನ ಜೊತೆಗೆ ಹೇಗೆ ಚಿನ್ನಾಟವಾಡಿದೆ, ಮತ್ತು ಆಡುತ್ತಿದೆ ಎಂದು ನೋಡಲಿಕ್ಕೆ ಕಲಿಗಣನಾಥರ ಕತೆಗಳನ್ನ ಓದಬೇಕು, ಎಲ್ಲಾ ಕಾಲಕ್ಕೂ ಉಸಿರಾಡುವ ಕತೆಗಳು, ಜೀವಪರ ಕಾಳಜಿ ಎಲ್ಲವನ್ನೂ ನಿಷ್ಕಲ್ಮಶ ದಿಂದ ನೋಡುವ ಗುಣ ಎಲ್ಲಾ ಕತೆಗಳಲ್ಲಿ ಇದೆ...

Read More...

ಪ್ರವಾದಿಯವರ ಬದುಕ ಓದಿಸುವ ’ಓದಿರಿ’

ಬೊಳುವಾರು ಮಹಮದ್ ಕುಂಞಿಯವರು ಬರೆದ ಪ್ರವಾದಿ ಮುಹಮ್ಮದ್ ಜೀವನಾಧಾರಿತ ಕಾದಂಬರಿ ’ಓದಿರಿ’. ಜಗದ ಎಲ್ಲಾ ನೊಂದಾಯಿತ ಧರ್ಮಗಳು ಶಾಂತಿ ಮತ್ತು ಪ್ರೀತಿಯನ್ನ ಬಿತ್ತುತ್ತವೆ ಎಂಬುದು ಅಧಿಕೃತವಾಗಿ ಅರಿವಿಗೆ ಬಂತು. ಧರ್ಮದ ಸ್ವಾಸ್ಥ್ಯ ಹಾಳಾಗಿರುವದಕ್ಕೆ ಬೇರೊಂದು ಧರ್ಮದ ಪುಟ ತಿರುಗಿಸದೇ ಇರುವದು ಕಾರಣ.

Read More...