Book Watchers

ಅರುಣ್ ಜೋಳದಕೂಡ್ಲಿಗಿ

ಅರಣ್ ಜೋಳದಕೂಡ್ಲಿಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಳದಕೂಡ್ಲಿಗಿಯ ಜಿ. ಹನುಮಂತಪ್ಪ, ಎಸ್. ನಾಗರತ್ನಮ್ಮ ಅವರ ಮಗನಾಗಿ 13.02.1980 ರಲ್ಲಿ ಜನಿಸಿದರು. ಕೂಡ್ಲಿಗಿ ತಾಲೂಕಿನ ಹಾರಕನಾಳು, ಉಜ್ಜಿನಿ, ಕೊಟ್ಟೂರಿನಲ್ಲಿ ಪದವಿವರೆಗಿನ ಶಿಕ್ಷಣ ಮುಗಿಸಿದ ಅವರು ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ.

Articles

ಗೌರಿಲಂಕೇಶ್ ಕಂಡಹಾಗೆ ಲೋಕದ ನಡೆಗಳು

ಗೌರಿ ಬರಹದಲ್ಲಿ ಹೆಣೆದಿರುವ ಪ್ರಭಾವಿ ಎಳೆಗಳಲ್ಲಿ `ಹಿಂದುತ್ವ’ ಧೋರಣೆಯ ವಿರೋಧ ಮುಖ್ಯವಾಗಿದೆ. ದೇಶದ ಬಹುತ್ವವನ್ನು ನಾಶಮಾಡುವ ಧಾರ್ಮಿಕ ಮೂಲಭೂತವಾದವನ್ನು ಸ್ಪಷ್ಟವಾಗಿಯೂ, ಖಚಿತವಾಗಿಯೂ ಖಂಡಿಸಿದ್ದಾರೆ. ಅಂತೆಯೇ ಈ ಬಗ್ಗೆ ಜನಾಭಿಪ್ರಾಯ ಮೂಡಿಸಲು ನಿರಂತರವಾಗಿ ಬರಹವನ್ನೇ ಮಾಧ್ಯಮವನ್ನಾಗಿಸಿಕೊಂಡಿದ್ದಾರೆ.

Read More...