Book Watchers

ಭಾರತೀದೇವಿ ಪಿ.

ಲೇಖಕಿ, ಅಂಕಣಕಾರ್ತಿ ಭಾರತೀದೇವಿ ಪಿ. ಅವರು ಮೂಲತಃ ಮೂಡುಬಿದರೆಯವರು. 1983 ಮಾರ್ಚ್ 19 ರಂದು ಜನಿಸಿದ ಭಾರತೀದೇವಿಯವರು ಪ್ರಾಥಮಿಕ ಶಿಕ್ಷಣವನ್ನು ಮೂಡುಬಿದರೆಯಲ್ಲಿಯೇ ಪೂರ್ಣಗೊಳಿಸಿದರು. ಆನಂತರ ಉಜಿರೆ ಹಾಗೂ ಚೆನ್ನೈನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಅವರು ಪ್ರಸ್ತುತ ಹಾಸನದ ಹೊಳೆನರಸೀಪುರದ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಭಾರತೀದೇವಿ ಅವರು ನಿಲ್ಲಿಸಬೇಡ ಯಾವುದನ್ನು, ಪಿಯರ್ ಬೋರ್ದು ವಿಚಾರಗಳು, ಮಹಿಳೆ ಮತ್ತು ದೇಹರಾಜಕಾರಣ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಆಂದೋಲನಯ ಪತ್ರಿಕೆಗೆ ಅಂಕಣಗಳನ್ನೂ ಬರೆಯುತ್ತಾರೆ .

Articles

ಕನ್ನಡ ಸಂಶೋಧನೆಯ ಹೊಸ ಸಾಧ್ಯತೆ ತೋರುವ ‘ಕನ್ನಡ ಕಥನಗಳು’....

ಕನ್ನಡದ ಕಥನಗಳನ್ನು ಮೂಲಭಿತ್ತಿಯಾಗಿ ಇರಿಸಿಕೊಂಡು ಭಾರತದ ಕಥನಗಳನ್ನು ಹೇಳುತ್ತದೆ. ನಮ್ಮ ಸಂಶೋಧನೆಗಳು ವಸಾಹತುಕಾಲದಿಂದ ಇಲ್ಲಿಯವರೆಗೆ ಸಾಗಿಬಂದ ದಾರಿಯನ್ನು ವಿಶ್ಲೇಷಣೆಗೆ ಒಳಪಡಿಸುತ್ತಾ ಅಧ್ಯಯನಕ್ಕೆ ಹೊರಡುವವರ ಮುಂದಿರುವ ಅಪಾರ ಸಾಧ್ಯತೆಗಳನ್ನು ತೆರೆದಿಡುತ್ತದೆ.

Read More...