ಕತೆಗಾರ ಚನ್ನಪ್ಪ ಕಟ್ಟಿ ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಇಂಗ್ಲಿಷ್ ಉಪನ್ಯಾಸಕರಾಗಿ ನಿವೃತ್ತರು.
‘ಇಂಡಿಯಾದಲ್ಲಿ’, ‘ನೆನಪುಗಳು ಸಾಯುವುದಿಲ್ಲ’, ‘ಸೂರ್ಯನಿಗೆ ಸಾವ ನೋಡಲು ಬೇಸರವಿಲ್ಲ’ ಮತ್ತು ‘ಮುಳುಗಡೆ ಮತ್ತು ಇತರ ಕತೆಗಳು’, ‘ಬೆಂಕಿ ಇರದ ಬೆಳಕು’, ‘ಏಕತಾರಿ’ ಮುಂತಾದ ಕತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
‘ಮಾಂತ್ರಿಕ ವಾಸ್ತವವಾದ’ ತಂತ್ರಗಾರಿಕೆಯನ್ನು ಅತ್ಯಂತ ಫಲಪ್ರದವಾಗಿ ಬಳಸಿಕೊಂಡ ಈ ಕಾದಂಬರಿ ಲೇಖಕನ ಮೊದಲ ಪ್ರಯತ್ನ ಎಂದು ನಂಬಲಾರದಷ್ಟು ಪರಿಪೂರ್ಣವಾಗಿದೆ. ಇಲ್ಲಿನ ನಿರೂಪಕ ನಾಯಕನ ಅನುಭವ ಲೋಕದ ಅನಾವರಣಕ್ಕೆ ಹೇಳಿ ಮಾಡಿಸಿದ ತಂತ್ರಗಾರಿಕೆ ಇದಾಗಿದೆ. ನಾಯಕ ಎರಡು ವಿಶಿಷ್ಟಲೋಕಗಳ ಮಧ್ಯೆ ಲಾಳಿ ಹೊಡೆದಾಡುತ್ತಿದ್ದಾನೆ. ನಾಯಕ-ನಿರೂಪಕನ ಅನುಭವ ಲೋಕ ಓದುಗನನ್ನು ಕುತೂಹಲದ ಅಗ್ಗಿಯ ಮೇಲೆ ನಿಲ್ಲುವಂತೆ ಮಾಡುತ್ತದೆ.